ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಮಗಳ ಮೇಲೆ ಅತ್ಯಾಚಾರ: 20 ವರ್ಷದ ಶಿಕ್ಷೆ 10ಕ್ಕೆ ಇಳಿಸಿದ ಹೈಕೋರ್ಟ್‌

Published 23 ಆಗಸ್ಟ್ 2023, 15:56 IST
Last Updated 23 ಆಗಸ್ಟ್ 2023, 15:56 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂವಿಧಾನದ 20ನೇ ಕಲಂ ಪ್ರಕಾರ ಕಾನೂನಿನಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಶಿಕ್ಷೆ ವಿಧಿಸಲು ಅವಕಾಶವಿಲ್ಲ‘ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಮಲಮಗಳ ಮೇಲೆ ಅತ್ಯಾಚಾರ ಎಸಗಿದ್ದ ತಂದೆಗೆ ವಿಚಾರಣಾ ನ್ಯಾಯಾಲಯ ನೀಡಿದ್ದ 20 ವರ್ಷಗಳ ಜೈಲು ಶಿಕ್ಷೆಯನ್ನು10 ವರ್ಷಕ್ಕೆ ಇಳಿಸಿದೆ.

ಈ ಸಂಬಂಧ ನಗರದ ಅಬ್ದುಲ್ ಖಾದರ್‌ ಅಲಿಯಾಸ್ ರಫೀಕ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದ್ದು, ಈ ಕುರಿತಂತೆ ಆದೇಶಿಸಿದೆ.

‘ಘಟನೆ ನಡೆದಿರುವುದು 2015ರಲ್ಲಿ. ಆಗ ಚಾಲ್ತಿಯಲ್ಲಿದ್ದ ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 376(2) ಪ್ರಕಾರ ಶಿಕ್ಷೆ ವಿಧಿಸಬೇಕು. ಆದರೆ, ವಿಚಾರಣಾ ನ್ಯಾಯಾಲಯ 2018ರ ಏಪ್ರಿಲ್‌ನಿಂದ ಜಾರಿಯಲ್ಲಿರುವ ಐಪಿಸಿ ಕಲಂ 376(3) ಪ್ರಕಾರ 20 ವರ್ಷ ಶಿಕ್ಷೆ ನೀಡಿರುವುದು ಸರಿಯಲ್ಲ‘ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?: ‘ನನ್ನ ಎರಡನೇ ಪತಿ ನನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾರೆ‘ ಎಂದು ಮಹಿಳೆಯೊಬ್ಬರು 2015ರ ಅಕ್ಟೋಬರ್ 13ರಂದು ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಆರೋಪಿಯು ಅತ್ಯಾಚಾರ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯ ಪೋಕ್ಸೊ ಕಾಯ್ದೆಯ ಕಲಂ 6 ಹಾಗೂ ಐಪಿಸಿ ಕಾಯ್ದೆ ಕಲಂ 376 (3)ರ ಅಡಿಯಲ್ಲಿ 2019ರ ಸೆಪ್ಟೆಂಬರ್ 29ರಂದು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆರೋಪಿ ಇದನ್ನು ಹೈಕೋ‌ರ್ಟ್‌ನಲ್ಲಿ ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT