ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಐಟಿಕೆ: ವೆಂಟಿಲೇಟರ್‌ ಸಾಮರ್ಥ್ಯ ದ್ವಿಗುಣ

ಆಸ್ಪತ್ರೆಗಳಲ್ಲಿ ಮೊದಲ ಹಂತದ ಪರೀಕ್ಷೆ ಯಶಸ್ವಿ
Last Updated 14 ಏಪ್ರಿಲ್ 2020, 19:34 IST
ಅಕ್ಷರ ಗಾತ್ರ

ಮಂಗಳೂರು: ವೆಂಟಿಲೇಟರ್‌ಗಳ ಸಾಮರ್ಥ್ಯ ವೃದ್ಧಿಗೆ ಇಲ್ಲಿನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕರ್ನಾಟಕ (ಎನ್‌ಐಟಿಕೆ)ದ ಸೆಂಟರ್‌ ಫಾರ್‌ ಸಿಸ್ಟಮ್‌ ಡಿಸೈನ್‌ (ಸಿಎಸ್‌ಡಿ) ವಿಭಾಗವು 3ಡಿ ತಂತ್ರಜ್ಞಾನ ಬಳಸಲು ಮುಂದಾಗಿದೆ.

ಎನ್ಐಟಿಕೆಯ ಪ್ರೊ. ಕೆ.ವಿ.ಗಂಗಾಧರನ್, ಡಾ.ಪೃಥ್ವಿರಾಜ್‌ ಅವರು ರಾಜ್ಯ ಮತ್ತು ರಾಷ್ಟ್ರೀಯ ತಂಡದೊಂದಿಗೆ ಈ ಸಂಬಂಧ ಕೆಲಸ ಮಾಡುತ್ತಿದ್ದಾರೆ. ವೆಂಟಿಲೇಟರ್‌ಗಳ ಸಾಮರ್ಥ್ಯ ದ್ವಿಗುಣವಾಗಿರುವುದು ಪ್ರಯೋಗದಿಂದ ವ್ಯಕ್ತವಾಗಿದೆ.

3ಡಿ ಮುದ್ರಿತ ಘಟಕಗಳ ಮೂಲಕ ಸರ್ಕ್ಯೂಟ್ ಸ್ಲಿಟರ್‌ಗಳು ಹಾಗೂ ಬಹುರೋಗಿಗಳ ಶಾಸಕೋಶಕ್ಕೆ ಆಮ್ಲಜನಕ
ಪೂರೈಸಲು ವೆಂಟಿಲೇಟರ್‌ಗಳಿಗೆ ಹರಿವಿನ ನಿಯಂತ್ರಕಗಳನ್ನು ತಯಾರಿಸಿದೆ. ಈಗಾಗಲೇ ಈ ಸಾಧನಗಳ ವಿನ್ಯಾಸ ಮಾಡಲಾಗಿದೆ. 10 ವಿವಿಧ ಆಸ್ಪತ್ರೆಗಳಲ್ಲಿ ಮೊದಲ ಹಂತದ ಪರೀಕ್ಷೆ ನಡೆಸಲಾಗಿದೆ.

ಸದ್ಯ ಎನ್ಐಟಿಕೆಯಲ್ಲಿ ಲಭ್ಯವಿರುವ 3 ಡಿ ಮುದ್ರಕಗಳು ಅಗತ್ಯ ಪ್ರಮಾಣದ ಉತ್ಪಾದನೆಗೆ ಸಾಕಾಗದು.

ಆದರೆ, ಸ್ಟ್ರಾಟಾಸಿಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ರಾಜೀವ್‌ ಬಜಾಜ್‌ ಅವರು, ಅಗತ್ಯವಿರುವ ಮುದ್ರಕಗಳನ್ನು ಒದಗಿಸಲು ಒಪ್ಪಿಕೊಂಡಿದ್ದಾರೆ. ಅಲ್ಲದೇ ಡೆಲ್ಇಎಂಸಿ ಕಂಪನಿಯ ಉಪಾಧ್ಯಕ್ಷ ಹಾಗೂ ಎನ್‌ಐಟಿಕೆಯ 1989ನೇ ಬ್ಯಾಚ್‌ನ ವಿದ್ಯಾರ್ಥಿ ರುದ್ರಮಣಿ, ಇದಕ್ಕಾಗಿ 3 ತಿಂಗಳಿಗೆ ಬೇಕಾಗುವ ಕಚ್ಚಾವಸ್ತುಗಳನ್ನು ಒದಗಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT