ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖೆಗೆ ಸಹಕಾರ: ಶಾಸಕ ಅರವಿಂದ ಲಿಂಬಾವಳಿ

Last Updated 2 ಜನವರಿ 2023, 15:53 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಮಿ ಪ್ರದೀಪ್‌ ಆತ್ಮಹತ್ಯೆ ಪ್ರಕರಣದ ತನಿಖೆಗೆ ಎಲ್ಲ ರೀತಿಯಲ್ಲೂ ಸಹಕಾರ ನೀಡುತ್ತೇನೆ ಎಂದು ಶಾಸಕ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರದೀಪ್‌ ನಮ್ಮ ಕಾರ್ಯಕರ್ತ. 2009 ರ ಲೋಕಸಭಾ ಚುನಾವಣೆ ವೇಳೆ ಸಾಮಾಜಿಕ ಜಾಲತಾಣದ ಗುತ್ತಿಗೆ ಪಡೆದು ಕೆಲಸ ಮಾಡಿದ್ದರು. ಆ ಬಳಿಕ ಪಕ್ಷವನ್ನು ಸೇರಿ, ಕಾರ್ಯಕರ್ತರಾಗಿ ವಾರ್ಡ್‌ ಮಟ್ಟದಲ್ಲೂ ಕೆಲಸ ಮಾಡಿದ್ದರು. ಅವರ ಸಾವು ಆಘಾತವುಂಟು ಮಾಡಿದೆ’ ಎಂದು ಹೇಳಿದರು.

‘ಕಳೆದ ಜುಲೈನಲ್ಲಿ ನನ್ನ ಕಚೇರಿಯಲ್ಲಿ ನಡೆಯುವ ಜನತಾ ದರ್ಶನಕ್ಕೆ ಬಂದಿದ್ದರು. ಜನತಾದರ್ಶನಕ್ಕೆ ಏಕೆ ಬಂದಿರುವುದಾಗಿ ಪ್ರಶ್ನಿಸಿದೆ. ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಹೇಳಿದ್ದರು. ಕೆಲವು ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿದ್ದು, ಹಣವನ್ನು ಹಿಂದಕ್ಕೆ ಪಡೆಯಲು ನೆರವು ನೀಡಬೇಕು ಎಂದು ಮನವಿ ಮಾಡಿದ್ದರು. ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಆ ಕಂಪನಿಗಳವರಿಗೆ ದೂರವಾಣಿ ಕರೆ ಮಾಡಿ, ಪ್ರದೀಪ್‌ ಸಮಸ್ಯೆ ಎದುರಿಸುತ್ತಿರುವುದರಿಂದ ಹಣ ಹಿಂದಕ್ಕೆ ಕೊಡುವಂತೆ ತಿಳಿಸಿದ್ದೆ’ ಎಂದರು.

‘ಇದಾದ 15 ದಿನಗಳ ಬಳಿಕ ಹಣ ಹಿಂದಿರುಗಿಸದಿದ್ದಾಗ ಮತ್ತೆ ಕರೆ ಮಾಡಿ ಸ್ವಲ್ಪ ಖಾರವಾಗಿಯೇ ಹಣ ಹಿಂದಕ್ಕೆ ನೀಡುವಂತೆ ಸೂಚಿಸಿದ್ದೆ. ಕೆಲವು ದಿನಗಳ ಬಳಿಕ ಪ್ರದೀಪ್‌ ಸಿಕ್ಕಾಗ, ಸಮಸ್ಯೆ ಬಗೆಹರಿದಿದೆ ಎಂದು ಹೇಳಿಕೊಂಡಿದ್ದರು. ಆದರೆ, ಡೆತ್‌ ನೋಟ್‌ನಲ್ಲಿ ಅರವಿಂದ ಲಿಂಬಾವಳಿ ಹೇಳಿದ ನಂತರ ಹಣ ನೀಡಲು ಒಪ್ಪಿದ್ದಾರೆ ಎಂದು ಬರೆದಿದ್ದಾರೆ. ಆದ್ದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು’ ಎಂದು ಲಿಂಬಾವಳಿ ಒತ್ತಾಯಿಸಿದರು.

‘ಇನ್ನು ಮುಂದೆ ಶಾಸಕರು ಇಂತಹ ಪ್ರಕರಣಗಳು ಬಂದಾಗ ಜಾಗ್ರತೆ ವಹಿಸಬೇಕು. ಡೆತ್‌ ನೋಟ್‌ನಲ್ಲಿ ನನ್ನ ಹೆಸರು ಬರೆದಿಟ್ಟಿದ್ದಾರೆ. ಮುಂದೆ ನಿಮ್ಮ ಹೆಸರುಗಳನ್ನೂ ಬರೆಯಬಹುದು. ಮುಖ್ಯಮಂತ್ರಿ ಬೊಮ್ಮಾಯಿ ಹೆಸರು ಬರೆದಿಟ್ಟರೆ ಏನು ಮಾಡುತ್ತೀರಿ? ನನ್ನನ್ನು ಸಿಲುಕಿಸಲು ಕಾಣದ ಕೈಗಳು ಈ ಕೃತ್ಯ ಮಾಡಿರಬಹುದು ಎಂದು ಭಾವಿಸುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT