ರಣಾಂಗಣದಲ್ಲಿ ಸೆಣಸಾಡುವ ಸ್ತ್ರೀ ಸೇನಾನಿಗಳಿಗೆಂದೇ ವಿಶೇಷ ರಕ್ಷಾ ಕವಚ ಅಭಿವೃದ್ಧಿಪಡಿಸಲಾಗಿದೆ. ಸಿಆರ್ಪಿಎಫ್, ಆರ್ಎಎಫ್ ಪಡೆಗಳ ಮಹಿಳಾ ಸಿಬ್ಬಂದಿಯೂ ಇನ್ನು ಮುಂದೆ ಧೈರ್ಯದಿಂದ ಮುನ್ನುಗಿ ಎದುರಾಳಿಗಳನ್ನು ಸದಬಡಿಯಬಹುದು. ಬೀದಿ ದೊಂಬಿ, ಗಲಭೆಯ ವೇಳೆಯಲ್ಲಿ ದುಷ್ಕರ್ಮಿಗಳ ಹಲ್ಲೆಯಿಂದ ರಕ್ಷಣೆ ಪಡೆಯಲು ಈ ರಕ್ಷಾ ಕವಚ ಉಪಯುಕ್ತ.
ಇದನ್ನು ಡಿಆರ್ಡಿಓ ಅಂಗ ಸಂಸ್ಥೆಯಾದ‘ಡಿಫೆನ್ಸ್ ಇನ್ಸ್ಟಿಟ್ಯೂಟ್ ಆಫ್ ಫಿಸಿಯಾಲಜಿ ಅಂಡ್ ಅಲೈಡ್ ಸೈನ್ಸಸ್’ (ಡಿಐಪಿಎಎಸ್) ಅಭಿವೃದ್ಧಿಪಡಿಸಿದೆ. ವಿಶ್ವದಲ್ಲೇ ಪ್ರಥಮ ಎನ್ನಲಾಗಿದ್ದು; ಸ್ತ್ರೀ ದೇಹದ ಆವಯವಗಳ ದತ್ತಾಂಶಗಳನ್ನು ಆಧರಿಸಿ(anthropometric) ಕರಾರುವಕ್ಕಾಗಿ ಅಭಿವೃದ್ಧಿ ಪಡಿಸಲಾಗಿದೆ. ಇದಕ್ಕೆ ‘ಫುಲ್ ಬಾಡಿ ಪ್ರೊಟೆಕ್ಟರ್’ ಎನ್ನಲಾಗುತ್ತದೆ. ಹಿಂಸಾತ್ಮಕ ಗಲಭೆ ಅಥವಾ ದೊಂಬಿಯನ್ನು ನಿಯಂತ್ರಿಸಲು ಪರಿಣಾಮಕಾರಿ ರಕ್ಷಾ ಕವಚವಾಗಿದೆ.
ರಕ್ಷಾ ಕವಚದ ಲಕ್ಷಣಗಳು:
* ವಿಶೇಷ ಪಡೆಗಳ ಮಹಿಳಾ ಯೋಧರ ಅಂಗರಚನೆಗೆ ತಕ್ಕಂತೆ ತಯಾರಿಸಲಾಗುತ್ತದೆ.