ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವೀನ್ಯತೆಯಲ್ಲಿ ಕರ್ನಾಟಕವೇ ಮೊದಲು

ಸೂಚ್ಯಂಕ ವರದಿ ಪ್ರಕಟಿಸಿದ ನೀತಿ ಆಯೋಗ: 2ನೇ ಸ್ಥಾನದಲ್ಲಿ ತಮಿಳುನಾಡು
Last Updated 17 ಅಕ್ಟೋಬರ್ 2019, 19:22 IST
ಅಕ್ಷರ ಗಾತ್ರ

ನವದೆಹಲಿ:ಭಾರತದ ನಾವೀನ್ಯತಾ ಸೂಚ್ಯಂಕದಲ್ಲಿ ಕರ್ನಾಟಕವು ಮೊದಲ ಸ್ಥಾನ ಪಡೆದಿದೆ.ಎರಡನೇ ಮತ್ತು ಮೂರನೇ ಸ್ಥಾನದಲ್ಲಿ ಕ್ರಮವಾಗಿ ತಮಿಳುನಾಡು ಮತ್ತು ಮಹಾರಾಷ್ಟ್ರ ಇವೆ.

‘ಭಾರತ ನಾವೀನ್ಯತಾ ಸೂಚ್ಯಂಕ–2019’ ಅನ್ನುನೀತಿ ಆಯೋಗವು ಇದೇ ಮೊದಲ ಬಾರಿ ಬಿಡುಗಡೆ
ಮಾಡಿದೆ.

‘ರಾಜ್ಯಗಳ ಕಾರ್ಯಕ್ಷಮತೆಯ ಪರಾಮರ್ಶೆಗೆ ಈ ಸೂಚ್ಯಂಕವು ನೆರವಾಗಲಿದೆ. ಎಲ್ಲ ರಾಜ್ಯಗಳ ಕಾರ್ಯಕ್ಷಮತೆಯ ನಡುವಣ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ಈ ಸೂಚ್ಯಂಕವು ಸಹಕಾರಿಯಾಗಲಿದೆ. ಅಲ್ಲದೆ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಲು ಅಗತ್ಯ ಒಳನೋಟ ನೀಡಲಿದೆ’ ಎಂದು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ.

‘ಭಾರತದಂತಹ ಬೃಹತ್ ದೇಶದಲ್ಲಿ ಯಾವುದೇ ನೀತಿಯ ರಚನೆ ಮತ್ತು ಅನುಷ್ಠಾನದ ವೇಳೆ ಸ್ಥಳೀಯ ಸಂಗತಿಗಳು ಪ್ರಮುಖ ಪಾತ್ರವಹಿಸುತ್ತವೆ. ಹೀಗಾಗಿ ಕೇಂದ್ರ ಸರ್ಕಾರದ ನೀತಿಗಳಿಗಿಂತ ಆಯಾ ರಾಜ್ಯಗಳಲ್ಲಿ ಜಾರಿಯಲ್ಲಿರುವ ನೀತಿಗಳು ನಾವೀನ್ಯತೆಯನ್ನು ಪ್ರಭಾವಿಸುತ್ತವೆ. ಹೀಗಾಗಿ ಪ್ರತಿ ರಾಜ್ಯವೂ ತನ್ನಲ್ಲಿರುವ ಸಂಪನ್ಮೂಲ ಮತ್ತು ಅಗತ್ಯಗಳ ಆಧಾರದ ಮೇಲೆತನ್ನದೇ ಆದ ನೀತಿಯನ್ನು ರೂಪಿಸಿಕೊಳ್ಳಬೇಕು’ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಶ್ರೇಯಾಂಕದ 3 ವಿಭಾಗಗಳು

1) ಪ್ರಮುಖ ರಾಜ್ಯಗಳು, 2) ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳು, 3) ಕೇಂದ್ರಾಡಳಿತ ಪ್ರದೇಶಗಳು/ನಗರ ಮತ್ತು ಸಣ್ಣ ರಾಜ್ಯಗಳು

2ನೇ ವಿಭಾಗದಲ್ಲಿ ಸಿಕ್ಕಿಂ ಪ್ರಥಮ, 3ನೇ ವಿಭಾಗದಲ್ಲಿ ದೆಹಲಿಗೆ ಮೊದಲ ಸ್ಥಾನ

ಪೂರಕ ಅಂಶಗಳು ಮತ್ತು ಕಾರ್ಯಕ್ಷಮತೆ ಎಂಬ ಎರಡು ವರ್ಗಗಳಲ್ಲಿ ರಾಜ್ಯಗಳು ಪಡೆದ ಅಂಕಗಳ ಆಧಾರದಲ್ಲಿ ಶ್ರೇಯಾಂಕ ನೀಡಲಾಗಿದೆ.

ಕರ್ನಾಟಕಕ್ಕೆ ಏಕೆ ಮೊದಲ ಶ್ರೇಯಾಂಕ?

l ಕಾರ್ಯಕ್ಷಮತೆ ಮಾನದಂಡಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದೇ ರಾಜ್ಯವು ಶ್ರೇಯಾಂಕದಲ್ಲಿ ಮೊದಲ ಸ್ಥಾನ ಪಡೆಯಲು ಕಾರಣ

l ಮೂಲಸೌಕರ್ಯ, ಕೌಶಲವಿರುವ ಕೆಲಸಗಾರರು, ಜ್ಞಾನದ ಅನ್ವಯ ಮತ್ತು ವ್ಯಾಪಾರದ ವಾತಾವರಣ ಮಾನದಂಡಗಳಲ್ಲಿಯೂ ಕರ್ನಾಟಕವು ಅತಿ ಹೆಚ್ಚು ಅಂಕಗಳನ್ನು ಪಡೆದಿದೆ.

ಪೂರಕ ಅಂಶಗಳಲ್ಲಿನ ಮಾನದಂಡಗಳು

1. ಮಾನವ ಸಂಪನ್ಮೂಲ

2. ಹೂಡಿಕೆ

3. ಕೌಶಲವಿರುವ ಕೆಲಸಗಾರರು

4. ವ್ಯಾಪಾರದ ವಾತಾವರಣ

5. ಸುರಕ್ಷತೆ ಮತ್ತು ಕಾನೂನು ಪರಿಸ್ಥಿತಿ

ಕಾರ್ಯಕ್ಷಮತೆಯ ಅಡಿಯಲ್ಲಿನ ಮಾನದಂಡಗಳು

1. ಜ್ಞಾನದ ಅನ್ವಯ

2. ಜ್ಞಾನದ ಪ್ರಸರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT