ಬೆಂಗಳೂರು: ವಿವಿಧ ಕಾರಣಗಳಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ (ಜಾತಿವಾರು ಸಮೀಕ್ಷೆ) ಭಾಗವಹಿಸಲು ಸಾಧ್ಯವಾಗದೇ ಇರುವವರು ನವೆಂಬರ್ 30ರವರೆಗೆ ಆನ್ಲೈನ್ ಮೂಲಕ ವಿವರಗಳನ್ನು ನಮೂದಿಸಬಹುದು ಎಂದು ಹಿಂದುಳಿದ ವರ್ಗಗಳ ಆಯೋಗ ತಿಳಿಸಿದೆ.

ಸಮೀಕ್ಷಕರು ಮನೆ–ಮನೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯವು ಅ. 31ಕ್ಕೆ ಅಂತ್ಯವಾಗಿತ್ತು. ಆನ್ಲೈನ್ ಮೂಲಕ ಜನರು ಸ್ವಯಂ ಮಾಹಿತಿ ದಾಖಲಿಸಲು ನ. 10ರವರೆಗೆ ಆಯೋಗ ಅವಕಾಶ ನೀಡಲಾಗಿತ್ತು. ಇದೀಗ ಈ ಅವಧಿಯನ್ನು ವಿಸ್ತರಿಸಲಾಗಿದೆ.

ಸಮೀಕ್ಷೆಯಲ್ಲಿ https://kscbcselfdeclaration.karnataka.gov.in ಲಿಂಕ್ ಮೂಲಕ ಭಾಗವಹಿಸಬಹುದು. ಜನರು ತಮ್ಮ ಮನೆಗೆ ನೀಡಲಾಗಿರುವ ಯುಎಚ್ಐಡಿ ಅಥವಾ ವಿದ್ಯುತ್ ಮೀಟರ್ನ ಆರ್ಆರ್ ಸಂಖ್ಯೆಯನ್ನು ಬಳಸಿಕೊಂಡು ಈ ಪೋರ್ಟಲ್ನಲ್ಲಿ ಮಾಹಿತಿ ತುಂಬಬಹುದು ಎಂದು ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎ. ದಯಾನಂದ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.