ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls 2024 | ಮೋದಿ ಭಾವಚಿತ್ರ ಬಳಕೆ: ಈಶ್ವರಪ್ಪ ಕೇವಿಯಟ್

-
Published 6 ಏಪ್ರಿಲ್ 2024, 17:32 IST
Last Updated 6 ಏಪ್ರಿಲ್ 2024, 17:32 IST
ಅಕ್ಷರ ಗಾತ್ರ

ಶಿವಮೊಗ್ಗ: ‘ನನ್ನ ಹೃದಯ ಬಗೆದರೆ ಅಲ್ಲಿ ಅಯೋಧ್ಯೆಯ ಶ್ರೀರಾಮಚಂದ್ರ ಹಾಗೂ ಪ್ರಧಾನಿ ನರೇಂದ್ರ ಮೋದಿ ಮಾತ್ರ ಕಾಣಸಿಗುತ್ತಾರೆ’ ಎಂದು ಹೇಳುತ್ತಿದ್ದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಈಗ ಮೋದಿ ಭಾವಚಿತ್ರ ಬಳಕೆ ವಿಚಾರದಲ್ಲಿ ತಮ್ಮ ವಾದವನ್ನೂ ಆಲಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

‘ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಭಾವಚಿತ್ರ ಬಳಸುತ್ತಿದ್ದು, ಬಿಜೆಪಿ ನನ್ನ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದಲ್ಲಿ ಆ ಪ್ರಕರಣದಲ್ಲಿ ನನ್ನ ವಾದವನ್ನೂ ಆಲಿಸಬೇಕು’ ಎಂದು ಕೋರಿ ಹೈಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ್ದಾರೆ.

ರಾಷ್ಟ್ರಭಕ್ತರ ಬಳಗದ ಹೆಸರಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕೆ.ಎಸ್‌.ಈಶ್ವರಪ್ಪ ಸಿದ್ಧತೆ ನಡೆಸಿದ್ದಾರೆ. ಪ್ರಚಾರದ ವೇದಿಕೆ, ಫ್ಲೆಕ್ಸ್, ಬ್ಯಾನರ್‌ಗಳಲ್ಲಿ ಪ್ರಧಾನಿ ಮೋದಿ ಅವರ ಭಾವಚಿತ್ರ ಹಾಕಿಕೊಳ್ಳುತ್ತಿದ್ದಾರೆ. ಇದು ಬಿಜೆಪಿ ಮುಖಂಡರ ಕಣ್ಣು ಕೆಂಪಾಗಿಸಿದೆ. ಈಚೆಗೆ ಬಿಜೆಪಿ ಅಭ್ಯರ್ಥಿ, ಸಂಸದ ಬಿ.ವೈ.ರಾಘವೇಂದ್ರ ಬಹಿರಂಗವಾಗಿಯೇ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

‘ಪ್ರಧಾನಿ ಮೋದಿ ಯಾರಪ್ಪನ ಮನೆಯ ಸ್ವತ್ತೂ ಅಲ್ಲ. ಅವರ ಭಾವಚಿತ್ರ ಬಳಸಿಯೇ ಸಿದ್ಧ’ ಎಂದು ಈಶ್ವರಪ್ಪ ತಿರುಗೇಟು ನೀಡಿದ್ದರು.

‘ಚುನಾವಣೆಯಲ್ಲಿ ಮೋದಿ ಅವರ ಭಾವಚಿತ್ರ ಬಳಕೆ ಮಾಡದಂತೆ ಕಾನೂನು ಕ್ರಮಕ್ಕೆ ಶಿವಮೊಗ್ಗದ ಬಿಜೆಪಿ ಮುಖಂಡರು ಸಿದ್ಧತೆ ನಡೆಸಿರುವ ಮಾಹಿತಿ ದೊರಕಿತ್ತು. ಹೀಗಾಗಿ  ಕೇವಿಯಟ್ ಸಲ್ಲಿಸಿದ್ದೇನೆ’ ಎಂದು ಈಶ್ವರಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನರೇಂದ್ರ ಮೋದಿ ಈ ದೇಶದ ಪ್ರಧಾನಿ. ಅವರು ಜನರ ಸ್ವತ್ತೇ ಹೊರತು ಯಾವುದೇ ಪಕ್ಷದ ಆಸ್ತಿಯಲ್ಲ. ಹೀಗಾಗಿಯೇ ಮೋದಿ ಅವರ ಭಾವಚಿತ್ರ ಬಳಕೆಗೆ ತಡೆಯಾಜ್ಞೆ ಕೋರಿ ಬಿಜೆಪಿ ಮುಖಂಡರು ಅರ್ಜಿ ಸಲ್ಲಿಸಿದಲ್ಲಿ ನನ್ನ ವಾದವನ್ನೂ ಪರಿಗಣಿಸುವಂತೆ ಕೇವಿಯಟ್ ಮೂಲಕ ನ್ಯಾಯಾಲಯಕ್ಕೆ ಮನವಿ ಮಾಡಿದ್ದೇನೆ’ ಎಂದರು.

‘ಈಶ್ವರಪ್ಪ ಅವರು ನ್ಯಾಯಾಲಯಕ್ಕೆ ಕೇವಿಯಟ್‌ ಸಲ್ಲಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಚುನಾವಣೆ ಮತ್ತು ಮತ ಗಳಿಕೆಯ ಕಾರಣಕ್ಕೆ ಮೋದಿ ಅವರ ಭಾವಚಿತ್ರವನ್ನು ಬಿಜೆಪಿ ಹೊರತಾಗಿ ಮತ್ಯಾರು ಬಳಕೆ ಮಾಡುವಂತಿಲ್ಲ. ಈ ಸಂಬಂಧ ಬಿಜೆಪಿ ಕಾನೂನಾತ್ಮಕ ಹೋರಾಟ ನಡೆಸಲಿದೆ. ಚುನಾವಣಾ ಆಯೋಗಕ್ಕೂ ದೂರು ನೀಡಲಿದ್ದೇವೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್‌ ತಿಳಿಸಿದ್ದಾರೆ. 

ಇದು ಬಿಜೆಪಿ ಮುಖಂಡರ ಕಣ್ಣು ಕೆಂಪಾಗಿಸಿದೆ. ಈಚೆಗೆ ಬಿಜೆಪಿ ಅಭ್ಯರ್ಥಿ, ಸಂಸದ ಬಿ.ವೈ.ರಾಘವೇಂದ್ರ ಬಹಿರಂಗವಾಗಿಯೇ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

‘ಪ್ರಧಾನಿ ಮೋದಿ ಯಾರಪ್ಪನ ಮನೆಯ ಸ್ವತ್ತೂ ಅಲ್ಲ. ಅವರ ಭಾವಚಿತ್ರ ಬಳಸಿಯೇ ಸಿದ್ಧ’ ಎಂದು ಈಶ್ವರಪ್ಪ ತಿರುಗೇಟು ನೀಡಿದ್ದರು.

‘ಚುನಾವಣೆಯಲ್ಲಿ ಮೋದಿ ಅವರ ಭಾವಚಿತ್ರ ಬಳಕೆ ಮಾಡದಂತೆ ಕಾನೂನು ಕ್ರಮಕ್ಕೆ ಶಿವಮೊಗ್ಗದ ಬಿಜೆಪಿ ಮುಖಂಡರು ಸಿದ್ಧತೆ ನಡೆಸಿರುವ ಮಾಹಿತಿ ದೊರಕಿತ್ತು. ಹೀಗಾಗಿ  ಕೇವಿಯಟ್ ಸಲ್ಲಿಸಿದ್ದೇನೆ’ ಎಂದು ಈಶ್ವರಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನರೇಂದ್ರ ಮೋದಿ ಈ ದೇಶದ ಪ್ರಧಾನಿ. ಅವರು ಜನರ ಸ್ವತ್ತೇ ಹೊರತು ಯಾವುದೇ ಪಕ್ಷದ ಆಸ್ತಿಯಲ್ಲ. ಹೀಗಾಗಿಯೇ ಮೋದಿ ಅವರ ಭಾವಚಿತ್ರ ಬಳಕೆಗೆ ತಡೆಯಾಜ್ಞೆ ಕೋರಿ ಬಿಜೆಪಿ ಮುಖಂಡರು ಅರ್ಜಿ ಸಲ್ಲಿಸಿದಲ್ಲಿ ನನ್ನ ವಾದವನ್ನೂ ಪರಿಗಣಿಸುವಂತೆ ಕೇವಿಯಟ್ ಮೂಲಕ ನ್ಯಾಯಾಲಯಕ್ಕೆ ಮನವಿ ಮಾಡಿದ್ದೇನೆ’ ಎಂದರು.

‘ಈಶ್ವರಪ್ಪ ಅವರು ನ್ಯಾಯಾಲಯಕ್ಕೆ ಕೇವಿಯಟ್‌ ಸಲ್ಲಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಚುನಾವಣೆ ಮತ್ತು ಮತ ಗಳಿಕೆಯ ಕಾರಣಕ್ಕೆ ಮೋದಿ ಅವರ ಭಾವಚಿತ್ರವನ್ನು ಬಿಜೆಪಿ ಹೊರತಾಗಿ ಮತ್ಯಾರು ಬಳಕೆ ಮಾಡುವಂತಿಲ್ಲ. ಈ ಸಂಬಂಧ ಬಿಜೆಪಿ ಕಾನೂನಾತ್ಮಕ ಹೋರಾಟ ನಡೆಸಲಿದೆ. ಚುನಾವಣಾ ಆಯೋಗಕ್ಕೂ ದೂರು ನೀಡಲಿದ್ದೇವೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್‌ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT