ಎಲ್ನಿನೊ ಕಡಿಮೆ: ಮುಂಗಾರು ಮಾರುತಗಳ ಮೇಲೆ ಪ್ರಭಾವ ಬೀರುವ ಎಲ್ನಿನೊ ವಿದ್ಯಮಾನ ಈ ಬಾರಿಯೂ ಸುದ್ದಿಯಲ್ಲಿದೆ. ಡಿಸೆಂಬರ್ ತಿಂಗಳಿನವರೆಗೂ ಎಲ್ನಿನೊ ಏರುಗತಿಯಲ್ಲಿತ್ತು. ಆದರೆ ಆ ಬಳಿಕ ಉಷ್ಣಾಂಶ ಸತತವಾಗಿ ಕುಸಿತ ಕಾಣುತ್ತಿದೆ. ಈ ಬಾರಿಯದ್ದು ಕಡಿಮೆ ಪ್ರಭಾವದ ಎಲ್ನಿನೊವರ್ಷವಾಗಲಿದೆ. ಈಗಿನ ವಿದ್ಯಮಾನವನ್ನು ಗಮನಿಸಿದರೆ, ಬರ ಆವರಿಸುವುದಿಲ್ಲ ಎಂದು ಖಚಿತವಾಗಿ ಹೇಳಬಹುದು. ಆದರೆ ಭಾರಿ ಮಳೆ ಸುರಿಯುತ್ತದೆ ಎಂದೂ ಅರ್ಥವಲ್ಲ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.