ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯು 2023 ಹಾಗೂ 2024ನೇ ಸಾಲಿನ ಪ್ರಶಸ್ತಿಗಳನ್ನು ಗುರುವಾರ ಪ್ರಕಟಿಸಿದ್ದು, ಎರಡು ವರ್ಷಗಳ ಪ್ರಶಸ್ತಿಗೆ 86 ಮಂದಿ ಆಯ್ಕೆಯಾಗಿದ್ದಾರೆ.

‘ಜೀವಮಾನದ ಸಾಧನೆ ಪ್ರಶಸ್ತಿ’ಗೆ ಅ.ಚ.ಶಿವಣ್ಣ, ವಾರ್ತಾ ಭಾರತಿಯ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಆಯ್ಕೆಯಾಗಿದ್ದಾರೆ. ವಾರ್ಷಿಕ ಪ್ರಶಸ್ತಿಗೆ ‘ಪ್ರಜಾವಾಣಿ’ಯ ಸಿದ್ದಯ್ಯ ಹಿರೇಮಠ, ಶಶಿಕಾಂತ್ ಶೆಂಬೆಳ್ಳಿ ಸೇರಿ 60 ಮಂದಿ ಭಾಜನರಾಗಿದ್ದಾರೆ.

ಎರಡು ವರ್ಷಗಳ ದತ್ತಿ ಪ್ರಶಸ್ತಿ ಗಳನ್ನೂ ಅಕಾಡೆಮಿ ಪ್ರಕಟಿಸಿದೆ. 2023ನೇ ಸಾಲಿನ ದತ್ತಿ ಪ್ರಶಸ್ತಿಗಳಿಗೆ ‘ಪ್ರಜಾವಾಣಿ’ಯ ಸಂಧ್ಯಾ ಹೆಗಡೆ ಸೇರಿ 11ಮಂದಿ ಹಾಗೂ 2024ನೇ ಸಾಲಿಗೆ ‘ಪ್ರಜಾವಾಣಿ’ಯ ಕೆ. ಓಂಕಾರಮೂರ್ತಿ, ಡಿ.ಎಂ. ಕುರ್ಕೆ ಪ್ರಶಾಂತ್, ಪ್ರಭು ಬ. ಅಡವಿಹಾಳ ಸೇರಿ 13 ಮಂದಿ ಆಯ್ಕೆಯಾಗಿದ್ದಾರೆ.

ವಾರ್ಷಿಕ ಪ್ರಶಸ್ತಿ: 2023ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಗಂಗಾಧರ ಮೊದಲಿಯಾರ್, ಉಷಾರಾಣಿ ಎನ್., ಸುಶೀಲೇಂದ್ರ ನಾಯಕ್, ವಾಸುದೇವ ಹೊಳ್ಳ, ಆಲ್ಪ್ರೆಡ್ ಟೆನ್ನಿಸನ್, ಮಾಲತಿ ಭಟ್, ಮನು ಅಯ್ಯಪ್ಪ, ಹರಿಯಬ್ಬೆ ಹೆಂಜಾರಪ್ಪ, ವಿಲಾಸ್ ನಾಂದೋಡ್ಕರ್, ಶಿವಕುಮಾರ್ ಬೆಳ್ಳಿತಟ್ಟೆ, ಸಿದ್ದಯ್ಯ ಹಿರೇಮಠ, ಶಶಿಕಾಂತ್ ಶೆಂಬೆಳ್ಳಿ, ಮನೋಜ್ಗೌಡ ಪಾಟೀಲ, ಆನಂದ ಬೈದನಮನೆ, ಮಧು ಜವಳಿ, ಎಂ.ಆರ್. ದಿನೇಶ್, ತಾರಾನಾಥ್, ಕೆ. ಮಲ್ಲಿಕಾರ್ಜುನ ಸಾಣಾಪೂರ, ಜಯಪ್ರಕಾಶ್, ಪುಂಡಲೀಕ ಭೀ. ಬಾಳೋಜಿ, ಇಬ್ರಾಹಿಂ ಅಡ್ಕಸ್ಥಳ, ಅನ್ನು ಮಂಗಳೂರು (ಪುಂಡಲೀಕ ಪೈ), ನಿಹಾಲ್ ಕಿದ್ವಾಯಿ, ರೋಹಿಣಿ ಸ್ವಾಮಿ, ಭಾವನಾ ನಾಗಯ್ಯ, ಮುನೀರ್ ಅಹ್ಮದ್ ಆಜಾದ್, ಹನುಮಾನ್ ಸಿಂಗ್ ಜಮಾದಾರ್, ಜೈಮುನಿ, ಶಿವಮೂರ್ತಿ ಗುರುಮಠ ಹಾಗೂ ಸಿರಾಜ್ ಬಿಸ್ರಳ್ಳಿ ಆಯ್ಕೆಯಾಗಿದ್ದಾರೆ.

2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಎ.ಎಸ್. ಬಾಲಸುಬ್ರಹ್ಮಣ್ಯ, ರಿಷಿಕೇಷ್ ಬಹದ್ದೂರ್ ದೇಸಾಯಿ, ಸುಭಾಷ್ ಹೂಗಾರ, ಟಿ. ಗುರುರಾಜ್, ಕುಮಾರನಾಥ್ ಯು.ಕೆ., ಸಿದ್ದು ಕಾಳೋಜಿ, ಆರ್.ಕೆ. ಜೋಷಿ, ಪ್ರಕಾಶ್ ಶೇಠ್, ಆರುಂಡಿ ಶ್ರೀನಿವಾಸಮೂರ್ತಿ, ರವೀಶ್ ಎಚ್.ಎಸ್., ಭಾನುಪ್ರಕಾಶ್, ಮಹೇಶ ಶೆಟಗಾರ, ರಮೇಶ್ ಜಹಗೀರದಾರ, ನಿರುಪಮಾ, ದಿನೇಶ್ ಗೌಡಗೆರೆ, ಡಿ.ಸಿ. ಮಹೇಶ್, ಎಚ್.ಎಸ್.ಹರೀಶ್, ಶರಣಯ್ಯ ಒಡೆಯರ್, ಅಶ್ವಿನಿ ಎಂ. ಶ್ರೀಪಾದ, ರಿಜ್ವಾನ್ ಅಸದ್, ಬನ್ಸಿ ಕಾಳಪ್ಪ, ಮನುಜಾ →ವೀರಪ್ಪ, ಜಯಂತ →ಜಿ., ವಿಖಾರ್ →ಅಹ್ಮದ್ →ಸಯೀದ್, →ಡಿ.ಎನ್. ಶಾಂಭವಿ →ನಾಗರಾಜ್, →ರಮೇಶ್ (ಹಾಬಿ →ರಮೇಶ್), ಸೋಮಶೇಖರ ಕಿಲಾರಿ, ನಾರಾಯಣಸ್ವಾಮಿ, ಅನೀಸ್ ನಿಸಾರ್ ಹಮೀದ್, ಹಾಗೂ ಸಂದೀಪ್ ಸಾಗರ್ ಆಯ್ಕೆಯಾಗಿದ್ದಾರೆ.

ಜೀವಮಾನದ ಸಾಧನೆ ಪ್ರಶಸ್ತಿಯು ತಲಾ ₹50 ಸಾವಿರ, ವಾರ್ಷಿಕ ಪ್ರಶಸ್ತಿ ತಲಾ ₹25 ಸಾವಿರ ಹಾಗೂ ದತ್ತಿ ಪ್ರಶಸ್ತಿಗಳು ತಲಾ ₹10 ಸಾವಿರ ನಗದು ಒಳಗೊಂಡಿವೆ. 2023ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದ ಗಂಗಾಧರ ಮೊದಲಿಯಾರ್ ಅವರು ಪ್ರಶಸ್ತಿ ನಿರಾಕರಿಸಿದ್ದು, ‘ನನಗೆ ಪ್ರಶಸ್ತಿ ದಯಪಾಲಿಸಿರುವುದಕ್ಕೆ ಅಧ್ಯಕ್ಷರಿಗೆ ಧನ್ಯವಾದಗಳು. ಜೀವಮಾನ ಸಾಧನೆಗಾಗಿ ರಾಜ್ಯ ಸರ್ಕಾರವು ನೀಡುವ ‘ಟಿಎಸ್ಆರ್ ಪ್ರಶಸ್ತಿ’ಯನ್ನು 2014ರಲ್ಲಿ ನನಗೆ ನೀಡಿ ಗೌರವಿಸಿದೆ. ಆದ್ದರಿಂದ ಮತ್ತೆ ಈ ಪ್ರಶಸ್ತಿ ಸ್ವೀಕರಿಸಲು ಮನಸ್ಸು ಒಪ್ಪುತ್ತಿಲ್ಲ. ಈ ಪ್ರಶಸ್ತಿ ಉದಯೋನ್ಮುಖ ಪತ್ರಕರ್ತರಿಗೆ ಸಲ್ಲಲಿ’ ಎಂದು ತಿಳಿಸಿದ್ದಾರೆ.

24 ಮಂದಿಗೆ ದತ್ತಿ ಪ್ರಶಸ್ತಿ

‘ಡಾ.ಬಿ.ಆರ್. ಅಂಬೇಡ್ಕರ್ ಮೂಕನಾಯಕ’ ಪ್ರಶಸ್ತಿಗೆ ಕೆ. ನೀಲಾ, ರಹಮತ್ ತರೀಕೆರೆ ಅವರನ್ನು ಆಯ್ಕೆ ಮಾಡಲಾಗಿದೆ.

‘ಅಭಿಮಾನಿ ದತ್ತಿ’ ಪ್ರಶಸ್ತಿಗೆ ರವಿಕುಮಾರ ಚನ್ನಬಸಪ್ಪ ಕಗ್ಗಣ್ಣವರ, ವಿಜಯ್ ಕೋಟ್ಯಾನ್, ಕೆ. ಓಂಕಾರಮೂರ್ತಿ, ಡಿ.ಎಂ. ಕುರ್ಕೆ ಪ್ರಶಾಂತ್, ‘ಮೈಸೂರು ದಿಗಂತ ದತ್ತಿ’ ಪ್ರಶಸ್ತಿಗೆ ಶಿವಾನಂದ ಗೊಂಬಿ, ಬಿ.ಕೆ. ದೇವಯ್ಯ, ನಂದೀಶ್ ಮಲ್ಲೇನಹಳ್ಳಿ, ‘ಅಭಿಮನ್ಯು ದತ್ತಿ’ ಪ್ರಶಸ್ತಿಗೆ ಸಂಧ್ಯಾ ಹೆಗಡೆ, ಪ್ರಭು ಬ. ಅಡವಿಹಾಳ, ‘ಪ್ರಜಾ ಸಂದೇಶ ದತ್ತಿ’ ಪ್ರಶಸ್ತಿಗೆ ಶಿಲ್ಪಾ ಪಿ., ಮೊಹಮ್ಮದ್ ಅಖೀಲ್ ಉಡೇವು, ಮಾಧ್ಯಮ ಮಹಾಸಾಧಕ ಸಿ.ವಿ. ರಾಜಗೋಪಾಲ್ ದತ್ತಿ’ ಪ್ರಶಸ್ತಿಗೆ ಕ.ಮ. ರವಿಶಂಕರ್, ಮ್ಯುರಿಯಲ್ ನಿರ್ಮಲಾ ಡಿಸಿಲ್ವ, ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೆಯುಡಬ್ಲ್ಯುಜೆ ದತ್ತಿ’ ಪ್ರಶಸ್ತಿಗೆ ವಿ. ವೆಂಕಟೇಶ್, ಎಚ್.ಎಸ್. ಸುಧೀಂದ್ರಕುಮಾರ್, ‘ಆಂದೋಲನ’ ಪ್ರಶಸ್ತಿಗೆ ಸಂಜೆ ದರ್ಶನ, ಹೊಸಪೇಟೆ ಟೈಮ್ಸ್, ‘ಬಸವರಾಜ ದೊಡ್ಡಮನಿ ಅವರು ಸ್ಥಾಪಿಸಿರುವ ಕೃಷಿಯಲ್ಲಿ ಅತ್ಯುತ್ತಮ ವರದಿ, ಲೇಖನ, ಅಂಕಣ ಬರಹಗಾರರ ಪ್ರಶಸ್ತಿಗೆ ಎಚ್.ಪಿ. ಪುಣ್ಯವತಿ, ಕೀರ್ತನಾ ಕುಮಾರಿ ಕೆ., ವೆಂಕಟೇಶ್, ‘ಅರಗಿಣಿ’ ಪ್ರಶಸ್ತಿಗೆ ತುಂಗರೇಣುಕ ಹಾಗೂ ಶ್ಯಾಮಪ್ರಸಾದ್ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.