ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸನಗೌಡ ಪಾಟೀಲ ಯತ್ನಾಳ್‌ ಹುಚ್ಚು ಶಾಸಕ: ಸಚಿವ ದಿನೇಶ್‌ ಗುಂಡೂರಾವ್‌ ಕಿಡಿ

Published 6 ಏಪ್ರಿಲ್ 2024, 16:31 IST
Last Updated 6 ಏಪ್ರಿಲ್ 2024, 16:31 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತೀಯ ಭ್ರಷ್ಟರ ಪಾರ್ಟಿಯಲ್ಲಿ ಯತ್ನಾಳ್‌ ಎಂಬ ಹುಚ್ಚು ಶಾಸಕ ಬಾಯಿಗೆ ಬಂದಂತೆ ಮಾತನಾಡುತ್ತಲೇ ಇರುತ್ತಾರೆ. ಯತ್ನಾಳ್‌ರಂತೆ ನಾವು ಮನೆ ಒಡೆಯುವ ಕೆಲಸ, ಕೀಳು ಭಾಷೆ ಬಳಕೆ ಮಾಡುವುದಿಲ್ಲ’ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸಚಿವ ದಿನೇಶ್‌ ಗುಂಡೂರಾವ್‌ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ. ದೇಶ ವಿರೋಧಿ ಹೇಳಿಕೆ ನೀಡುವುದು ಅವರ ಚಟವಾಗಿದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರ ಹೇಳಿಕೆಗೆ ‘X’ (ಟ್ವೀಟ್‌) ಮೂಲಕ ಪ್ರತಿಕ್ರಿಯಿಸಿರುವ ದಿನೇಶ್‌, ‘ಮತಾಂಧತೆಯಲ್ಲಿ ಬಿದ್ದು ಹೊರಳಾಡುತ್ತಿರುವ ಯತ್ನಾಳ್‌ ಮಾತೆತ್ತಿದರೆ ಪಾಕಿಸ್ತಾನ, ಪಾಕಿಸ್ತಾನ ಎನ್ನುತ್ತಾರೆ. ಅವರಿಗೆ ಪಾಕಿಸ್ತಾನದ ಮೇಲೆ ಅಷ್ಟೊಂದು ಪ್ರೀತಿಯಿದ್ದರೆ ಅಲ್ಲಿಗೇ ಹೋಗಲಿ’ ಎಂದಿದ್ದಾರೆ.

‘ಬಿಜೆಪಿ ಭೀಷ್ಮ ಅಡ್ವಾಣಿಯವರ ಮೂಲವೇ ಪಾಕಿಸ್ತಾನ. ಆಮಂತ್ರಣವೇ ಇಲ್ಲದೇ ಪಕ್ಕದ ಮನೆಗೆ ಹೋಗುವಂತೆ ವೈರಿ ದೇಶಕ್ಕೆ ಹೋಗಿ ಬಂದವರು ಮೋದಿ. ತಲೆಯಲ್ಲಿ ಮೆದುಳೇ ಇಲ್ಲದಂತೆ ಮಾತನಾಡುವ, ಅರೆ ಹುಚ್ಚನಂತಾಗಿರುವ ಯತ್ನಾಳ್‌ರಿಂದ ಪಾಠ ಕಲಿಯುವ ಕರ್ಮ ನನಗಿನ್ನೂ ಬಂದಿಲ್ಲ’ ಎಂದು ಕಿಡಿಕಾರಿದ್ದಾರೆ.

ದೂರು: ‘ ದಿನೇಶ್‌ ಗುಂಡೂರಾವ್ ಮತ್ತು ಅವರ ಕುಟುಂಬದವರನ್ನು ದೇಶದ್ರೋಹಿಗಳು ಎಂದು ಅವಹೇಳನಕಾರಿ ಹೇಳಿಕೆ ನೀಡಿರುವ ಯತ್ನಾಳ್‌ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಶೇಷಾದ್ರಿಪುರ ಪೊಲೀಸ್‌ ಠಾಣಾಧಿಕಾರಿಗೆ ಮತ್ತು ಮುಖ್ಯ ಚುನಾವಣಾ ಆಯುಕ್ತರಿಗೆ ಗಾಂಧಿನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜೆ. ಸರವಣನ್‌ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT