ಬೆಂಗಳೂರು: ಉಪ ಸಭಾಪತಿ ಸ್ಥಾನಕ್ಕೆ ಜೆಡಿಎಸ್ ಬೆಂಬಲದಲ್ಲಿ ಬಿಜೆಪಿಯ ಎಂ.ಕೆ. ಪ್ರಾಣೇಶ್ ನಾಮ ಪತ್ರ ಸಲ್ಲಿಸಿದರು.. ಆ ಮೂಲಕ, ಬಿಜೆಪಿ– ಜೆಡಿಎಸ್ ನಡುವೆ ಮತ್ತೊಂದು ಸುತ್ತಿನ ‘ಮೈತ್ರಿ’ ಆರಂಭಗೊಂಡಿದೆ.

ಬಿಜೆಪಿ ಸದಸ್ಯ ಎಂ.ಕೆ ಪ್ರಾಣೇಶ್ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್‌ನ ಬಸವರಾಜ ಹೊರಟ್ಟಿ, ಕೋನರೆಡ್ಡಿ ಉಪಸ್ಥಿತತರಿದ್ದರು.

ಉಪಸಭಾಪತಿ ಚುನಾವಣೆಗೆಕಾಂಗ್ರೆಸ್ ಅಭ್ಯರ್ಥಿಯಾಗಿಕೆ.ಸಿ.ಕೊಂಡಯ್ಯ ನಾಮಪತ್ರ ಸಲ್ಲಿಸಿದ್ದು, ಈ ವೇಳೆ ಪರಿಷತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ , ಮುಖ್ಯ ಸಚೇತಕ ನಾರಾಯಣ್ ಸ್ವಾಮಿ, ಬಿಕೆ ಹರೀಪ್ರಸಾದ್ ಉಪಸ್ಥಿತರಿದ್ದರು.

ಜೆಡಿಎಸ್ ಮುಖಂಡ ಎಸ್.ಎಲ್. ಧರ್ಮೇಗೌಡರ ನಿಧನದಿಂದ ಉಪ ಸಭಾಪತಿ ಸ್ಥಾನ ತೆರವಾಗಿತ್ತು. ಸಭಾಪತಿ ಸ್ಥಾನ ಜೆಡಿಎಸ್‌ನ ಬಸವರಾಜ ಹೊರಟ್ಟಿ ಪಾಲಾಗಲಿದೆ.

ವಿಧಾನ ಪರಿಷತ್‌ನಲ್ಲಿ ಆಡಳಿತಾರೂಢ ಬಿಜೆಪಿ ಪ್ರಾಬಲ್ಯ ಹೊಂದಿಲ್ಲದಿರುವುದರಿಂದ ಮಸೂದೆಗಳು ಅಂಗೀಕಾರವಾಗುವಲ್ಲಿ ಜೆಡಿಎಸ್ ಜೊತೆಗಿನ ಈ ಮೈತ್ರಿ ನೆರವಿಗೆ ಬರಲಿದೆ.

ಪರಿಷತ್ ನಲ್ಲಿ 31 ಸದಸ್ಯರನ್ನು ಹೊಂದುವ ಮೂಲಕ ಬಿಜೆಪಿ ಅತಿ ದೊಡ್ಡ ಪಕ್ಷವಾಗಿದ್ದರೂ 75 ಸದಸ್ಯ ಬಲದ ಸದನದಲ್ಲಿ ಜೆಡಿಎಸ್ ನ 13 ಸದಸ್ಯರ ಬೆಂಬಲ ಈಗಲೂ ಅಗತ್ಯವಾಗಿದೆ.ಕಾಂಗ್ರೆಸ್‌ನ 28, ಪಕ್ಷೇತರ ಒಬ್ಬರು ಇದ್ದಾರೆ. ಒಂದು ಸ್ಥಾನ ಈ ಖಾಲಿ ಇದೆ. ಸಭಾಪತಿ ಸ್ಥಾನವನ್ನು ಬಯಸಿರುವ ಜೆಡಿಎಸ್, ಬಿಜೆಪಿಗೆ ವಿಷಯಾಧಾರಿತ ಬೆಂಬಲ ನೀಡುವುದಾಗಿ ಮಂಗಳವಾರ ನಡೆದ ಸಭೆಯಲ್ಲಿ ನಿರ್ಧರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.