ಬೆಂಗಳೂರು: ‘ಪೀಣ್ಯದ ಅಕ್ಕಮಹಾದೇವಿ ಕೊಳೆಗೇರಿ ಪ್ರದೇಶವನ್ನು ತೆರವುಗೊಳಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳ ಕಾರ್ಯಾಚರಣೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರ ಕರಾಳ ಚರಿತ್ರೆಯ ಮುಂದುವರಿದ ಭಾಗ. . .

ಸಂತ್ರಸ್ತೆಯ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ಎಚ್. ಹನುಮಂತರಾಯ ಅವರು ವಿಶೇಷ ನ್ಯಾಯಾಲಯದಲ್ಲಿ ವಾದಿಸಿದ ಪರಿ ಇದು.

‘ಮಾದಿಗ ಸಮುದಾಯದ 20 ವರ್ಷದ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದ್ದಾರೆ’ ಎಂದು ಆರೋಪಿಸಲಾದ ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯಾಗಿರುವ ಮುನಿರತ್ನ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಮಂಗಳವಾರ ವಿಚಾರಣೆ ನಡೆಸಿದರು.

ಈ ವೇಳೆ, ಸಿ.ಎಚ್.ಹನುಮಂತರಾಯ ಅವರು, ‘ಮುನಿರತ್ನ ಒಂದು ಕಾಲದ ಲೀಡಿಂಗ್ ರೌಡಿ. ಇವರ ವಿರುದ್ಧ ಈಗಲೂ ಎಂಟು ಕ್ರಿಮಿನಲ್ ಕೇಸುಗಳು ಬಾಕಿ ಇವೆ. ‘ಈ ಪ್ರಕರಣದಲ್ಲಿ ಮುನಿರತ್ನ ಅವರ ಯಾವುದೇ ಪಾತ್ರವೂ ಇಲ್ಲ. ಪಿತೂರಿಯನ್ನೂ ಮಾಡಿಲ್ಲ. ತೆರವು ಕಾರ್ಯಾಚರಣೆಯೆಲ್ಲಾ ಕಾನೂನು ಬದ್ಧವಾಗಿಯೇ ನಡೆದಿದೆ’ ಎಂದು ಅವರ ಪರ ಹಿರಿಯ ವಕೀಲರು ಈ ಹಿಂದಿನ ವಿಚಾರಣೆ ವೇಳೆ ಪ್ರತಿಪಾದಿಸಿದ್ದರು. ಆದರೆ, ಇದನ್ನೆಲ್ಲಾ ಈ ಫೋಟೊಗಳು ಸುಳ್ಳು ಮಾಡುತ್ತವೆ ಎಂದು ತೆರವು ಕಾರ್ಯಾಚರಣೆ ನಡೆಸಿದ ದಿನದಂದು ಮುನಿರತ್ನ ಸ್ಥಳದಲ್ಲಿ ಹಾಜರಿದ್ದು, ತಮ್ಮ ಅನುಯಾಯಿಗಳಿಗೆ ಹುಕುಂ ನೀಡುತ್ತಿದ್ದರು’ ಎಂಬ ಫೋಟೊಗಳನ್ನು ಪ್ರದರ್ಶಿಸಿ ನ್ಯಾಯಾಧೀಶರಿಗೆ ಸಲ್ಲಿಸಿದರು. ಅಂತೆಯೇ, ‘ಬಿಬಿಎಂಪಿ ವಲಯ ಆಯುಕ್ತರು ಅಂದು ತೆರವು ಕಾರ್ಯಾಚರಣೆಗೆ ಅನುಮತಿ ನೀಡಿರಲಿಲ್ಲ’ ಎಂಬ ಹಿಂಬರಹವನ್ನು ನೀಡಿದರು.

‘ಪತ್ರಕರ್ತ ರವಿ ಬೆಳಗೆರೆ 1995ರಲ್ಲೇ ಬೆರೆದಿರುವ ಪಾಪಿಗಳ ಲೋಕ ಪುಸ್ತಕದಲ್ಲಿ ಕೊತ್ವಾಲ ರಾಮಚಂದ್ರನ ಶಿಷ್ಯ ಮುನಿರತ್ನಂ ಹೇಳಿದ ಕಥೆಯಲ್ಲಿ; ಮುನಿರತ್ನ ಹೇಗಿದ್ದರು, ಹೇಗಾಗಿದ್ದಾರೆ ಎಂಬುದನ್ನು ಸವಿವರವಾಗಿ ಪ್ರಕಟಿಸಲಾಗಿದೆ. ಅಂದು ಮುನಿರತ್ನ, ಕೊತ್ವಾಲ ರಾಮಚಂದ್ರ ಮುಂದೆ ಬೇಡಿಕೊಂಡು ತಿರುಗಾಡುತ್ತಿದ್ದರು. ಇವತ್ತು ಶಾಸಕ. ಮಾಜಿ ಮಂತ್ರಿ. ಇವರ ಘೋಷಿತ ಆಸ್ತಿಯ ಒಟ್ಟು ಮೊತ್ತ ₹293 ಕೋಟಿ. ಇದನ್ನೆಲ್ಲಾ ಹೇಗೆ ಗಳಿಸಿದ್ದೀರಿ ಎಂದು ಯಾರಾದರೂ ಕೇಳಿದರೆ ಬಿಸಿನೆಸ್ ಎನ್ನುತ್ತಾರೆ. ಯಾವ ರೀತಿಯ ಬಿಸಿನೆಸ್ನಲ್ಲಿ ಇದನ್ನೆಲ್ಲಾ ಗಳಿಸಿದ್ದಾರೋ ಗೊತ್ತಿಲ್ಲ. ಆದರೆ, ಇಷ್ಟೊಂದು ಮೊತ್ತವನ್ನು ಬಿಬಿಎಂಪಿ ಗುಡಿಸಿ ಗುಂಡಾರ ಮಾಡಿ ಗುಡ್ಡೆ ಹಾಕಿಕೊಂಡಿರುವುದು ಮಾತ್ರ ಸ್ಪಷ್ಟ’ ಎಂದು ದಾಖಲೆಗಳ ಸಮೇತ ಬಣ್ಣಿಸಿದರು.

ವಾದ ಆಲಿಸಿದ ನ್ಯಾಯಾಧೀಶರು, ‘ಆರೋಪಿ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂಬ ಆದೇಶವನ್ನು ವಿಸ್ತರಿಸಿ, ತೆರವು ಕಾರ್ಯಾಚರಣೆ ನಡೆಸಿದ ದಿನದಂದು ಪೊಲೀಸರು ಯಾವ ಕ್ರಮ ಕೈಗೊಂಡಿದ್ದರು ಎಂಬ ಬಗ್ಗೆಗಿನ ಕೇಸ್ ಡೈರಿಯನ್ನು (ಸಿ.ಡಿ) ನಾಳೆ ಕೋರ್ಟ್ಗೆ ಹಾಜರುಪಡಿಸಬೇಕು’ ಎಂದು ಪ್ರಾಸಿಕ್ಯೂಷನ್ ಪರ ವಕೀಲರಿಗೆ ಆದೇಶಿಸಿ ವಿಚಾರಣೆಯನ್ನು ಬುಧವಾರಕ್ಕೆ (ಫೆ.05) ಮುಂದೂಡಿದರು. ಮುನಿರತ್ನ ಪರ ಹೈಕೋರ್ಟ್ ವಕೀಲ ಎಸ್.ಎಸ್.ಶ್ರೀನಿವಾಸ ರಾವ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.