ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಅಜ್ಜನ ಜಾತ್ರೆಯಲ್ಲಿ ಮಿರ್ಚಿ ಘಮಲು

Published 28 ಜನವರಿ 2024, 6:26 IST
Last Updated 28 ಜನವರಿ 2024, 6:26 IST
ಅಕ್ಷರ ಗಾತ್ರ

ಕೊಪ್ಪಳ: ಗವಿಮಠದ ಗವಿಸಿದ್ಧೇಶ್ವರ ಜಾತ್ರೆಯ ಮಹಾದಾಸೋಹದಲ್ಲಿ ಉತ್ತರ ಕರ್ನಾಟಕದ ಪ್ರಸಿದ್ಧ ಖಾದ್ಯ ಮಿರ್ಚಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ. ಮಿರ್ಚಿ ತಯಾರಿಕೆಗೆ ಕೊಪ್ಪಳದ ಸಮಾನ ಮನಸ್ಕ ಸ್ನೇಹಿತರ ತಂಡ ಆರು ವರ್ಷಗಳ ಹಿಂದೆ ಮಿರ್ಚಿ ತಯಾರಿಕೆ ಆರಂಭಿಸಿತು.

ದಾನಿಗಳು, ಸ್ನೇಹಿತರು ಹಣ ಹಾಕಿ ಮಿರ್ಚಿ ತಯಾರಿಕೆ ಮಾಡುತ್ತಾರೆ. ದಾಸೋಹಕ್ಕಾಗಿ ಬರುವ ಲಕ್ಷಾಂತರ ಭಕ್ತರಿಗೆ ಮಿರ್ಚಿ ಉಣಬಡಿಸುತ್ತಾರೆ. ಮಿರ್ಚಿ ತಯಾರಿಸುವ ಕಾರ್ಯ ಜಾತ್ರೆಯ ಎರಡನೇ ದಿನವಾದ ಭಾನುವಾರ ಬೆಳಗಿನ ಜಾವವೇ ಆರಂಭವಾಗಿದ್ದು 400 ಬಾಣಸಿಗರು ಮಿರ್ಚಿ ತಯಾರಿಸುತ್ತಿದ್ದಾರೆ.

ಮಿರ್ಚಿಯ ರುಚಿಗೆ ಮನಸೋತ ಭಕ್ತರು ನಾಲ್ಕೈದು ಮಿರ್ಚಿಗಳನ್ನು ತಿನ್ನುವ ಜೊತೆಗೆ ಲಕ್ಷಾಂತರ ಪ್ರಮಾಣದಲ್ಲಿ ಮಿರ್ಚಿ ಹೇಗೆ ತಯಾರಿಸಲಾಗುತ್ತದೆ ಎನ್ನುವ ಕುತೂಹಲದಿಂದಲೂ ಜನ ಮಿರ್ಚಿ ತಯಾರಿಸುವ ದಾಸೋಹ ಮನೆಗೆ ಭೇಟಿ ನೀಡುತ್ತಿದ್ದಾರೆ.

ಒಟ್ಟು ನಾಲ್ಕೂವರೆ ಲಕ್ಷ ಮಿರ್ಚಿ ತಯಾರಾಗಲಿದ್ದು, ಇದಕ್ಕಾಗಿ 25 ಕ್ವಿಂಟಲ್ ಹಸೆ ಹಿಟ್ಟು, 10 ಬ್ಯಾರಲ್ ಅಡುಗೆ ಎಣ್ಣೆ, 20 ಕ್ವಿಂಟಲ್ ಮೆಣಸಿನಕಾಯಿ, 60 ಕೆ.ಜಿ. ಅಜಿವಾನ, 60 ಕೆ.ಜಿ. ಉಪ್ಪು, ಸೊಡಾಪುಡಿ ಬಳಕೆ ಮಾಡಲಾಗಿದೆ.

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಿರ್ಚಿ ಮಾಡಲು ಕೊಪ್ಪಳ ಜಿಲ್ಲೆಯ ಸುತ್ತಮುತ್ತಲಿನ ಊರುಗಳ ಜನರೇ ಬಾಣಸಿಗರಾಗಿ ಬರುತ್ತಾರೆ. ವಿಶೇಷವೆಂದರೆ ಇವರು ಯಾರೂ ನಯಾಪೈಸೆ ಪಡೆಯುವುದಿಲ್ಲ. ಅಜ್ಜನ ದೊಡ್ಡ ಜಾತ್ರೆಗೆ ನಮ್ಮದು ಸಣ್ಣ ಸೇವೆ ಇರಲಿ ಎಂದು ಮಿರ್ಚಿ ತಯಾರಿಸುವ ಕೆಲಸ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT