ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ವೀಸಾಗಾಗಿ ಕಾಯುವ ಕಾಲ ಬರಲಿದೆ: ಬಸವರಾಜ ಬೊಮ್ಮಾಯಿ

Published 9 ಮಾರ್ಚ್ 2024, 16:00 IST
Last Updated 9 ಮಾರ್ಚ್ 2024, 16:00 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಸ್ತುತ ಅಮೆರಿಕದ ವೀಸಾ ಪಡೆಯುವುದು ಭಾರತೀಯರಿಗೆ ಕಷ್ಟವಾಗಿದೆ. ಭವಿಷ್ಯದಲ್ಲಿ ಭಾರತದ ವೀಸಾಗಾಗಿ ಅಮೆರಿಕನ್ನರು ಕಾಯುವ ಪರಿಸ್ಥಿತಿ ನಿರ್ಮಾಣವಾಗಲಿದೆ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಎಥಿರಿಯಲ್ ಮಷಿನ್ಸ್ ಕಾರ್ಖಾನೆಯ ನೂತನ ಘಟಕವನ್ನು ನಗರದಲ್ಲಿ ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಪ್ರತಿಯೊಬ್ಬರಿಗೂ ಅಮೆರಿಕಕ್ಕೆ ಹೋಗಬೇಕೆಂಬ ಬಯಕೆ ಇರುತ್ತದೆ. ಆದರೆ, ಅಮೆರಿಕದ ವೀಸಾ ಸಿಗುವುದು ಸುಲಭದ ವಿಷಯವಲ್ಲ. ಭವಿಷ್ಯದಲ್ಲಿ ಅಲ್ಲಿಯ ಜನರು ಭಾರತೀಯ ವೀಸಾಗಾಗಿ ಕಾಯುವ ಕಾಲ ಬರುತ್ತದೆ. ಸಂಶೋಧನೆ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ನಮ್ಮ ಯುವಕರು ಹೆಮ್ಮೆ ಪಡುವಂತಹ ಸಾಧನೆ ಮಾಡುತ್ತಿದ್ದಾರೆ’ ಎಂದು ಹೇಳಿದರು. 

‘ಬಹಳ ಜನರು ಸಾಕಷ್ಟು ಕನಸು, ಕಲ್ಪನೆಗಳನ್ನು ಹೊಂದಿರುತ್ತಾರೆ. ಆದರೆ, ಎಲ್ಲರೂ ಅದನ್ನು ಸಾಧಿಸಲು ಆಗುವುದಿಲ್ಲ. ನಾನು ಟಾಟಾ ಮೋಟರ್ಸ್ ಕಂಪನಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಆ ಕಂಪನಿ ಅವರು ಮರ್ಸಿಡೀಸ್ ಬೆಂಜ್ ಕಾರ್ ಜತೆಗಿನ ಒಪ್ಪಂದ ಮುಗಿದ ತಕ್ಷಣ ತಮ್ಮದೇ ಸ್ವಂತ ಬಿಡಿ ಭಾಗಗಳನ್ನು ಬಳಸಿ, ಕಾರು ಉತ್ಪಾದನೆ ಮಾಡಲು ಆರಂಭಿಸಿದರು. ಎಥಿರಿಯಲ್ ಸಂಸ್ಥೆ ಕೂಡ ಟಾಟಾ ಮೋಟರ್ಸ್ ರೀತಿ ಬೆಳೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನಾವು ಕಾಯಕವೇ ಕೈಲಾಸ ಎಂದು ಹೇಳುತ್ತೇವೆ. ಆದರೆ, ನಾವು ಅದನ್ನು ಪಾಲಿಸುವುದಿಲ್ಲ. ವಿದೇಶಿಗರು ವಾಸ್ತವಿಕತೆಯಲ್ಲಿ ನಂಬಿಕೆಯಿಟ್ಟು ಕೆಲಸ ಮಾಡುತ್ತಾರೆ. ನಾವು ಅದೃಷ್ಟವನ್ನು ನಂಬುತ್ತೇವೆ. ಆದರೆ, ಅದೃಷ್ಟ ಎನ್ನುವುದು ನಮ್ಮ ಕಠಿಣ ಶ್ರಮದ ಮುಂಚೆ ದೊರೆಯುವ ಬೋನಸ್’ ಎಂದರು.

‘ಜಗತ್ತಿನಲ್ಲಿ ಅಭಿವೃದ್ಧಿ ಪರ್ವ ತುತ್ತ ತುದಿಯಲ್ಲಿದ್ದು, ಭಾರತದಲ್ಲಿ ಈಗ ಅಭಿವೃದ್ಧಿ ಪಥ ಆರಂಭವಾಗಿದೆ. ಭಾರತದಲ್ಲಿ ಸಂಶೋಧನಾ ವಲಯದಲ್ಲಿ ಸಾಕಷ್ಟು ಅವಕಾಶಗಳು ತೆರೆದುಕೊಳ್ಳುತ್ತಿವೆ. ಭವಿಷ್ಯ ಭಾರತದ್ದಾಗಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT