ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ಖರೀದಿ: ಶೇ 10 ರಿಯಾಯ್ತಿ ಮುಂದುವರಿಕೆ

Last Updated 21 ಏಪ್ರಿಲ್ 2022, 11:27 IST
ಅಕ್ಷರ ಗಾತ್ರ

ಬೆಂಗಳೂರು: ಕಂದಾಯ ಇಲಾಖೆ ರಾಜ್ಯದಾದ್ಯಂತ ಎಲ್ಲ ಸ್ವತ್ತುಗಳ ಮಾರಾಟ ಮತ್ತು ಖರೀದಿ ಮಾಡುವವರಿಗೆ ಮಾರ್ಗಸೂಚಿ ದರದಲ್ಲಿ ಶೇ 10 ರಿಯಾಯಿತಿಯನ್ನು ಇದೇ ಜುಲೈ 24 ರವರೆಗೆ ಮುಂದುವರಿಸಿ ಆದೇಶ ಹೊರಡಿಸಿದೆ.

ಸರ್ಕಾರ ಈ ಹಿಂದೆ 2022 ರ ಜನವರಿ 1 ರಿಂದ ಮಾರ್ಚ್‌ 31 ರವರೆಗೆ ರಿಯಾಯ್ತಿಯನ್ನು ಘೋಷಿಸಿತ್ತು. ರಿಯಾಯ್ತಿ ಮುಂದುವರಿಸಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಬಂದ ಕಾರಣ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದ್ದಾರೆ.

ಕೋವಿಡ್‌ನಿಂದ ಆಗಿರುವ ಆದಾಯ ನಷ್ಟ ಭರಿಸಲು ಮತ್ತು ಆಸ್ತಿ ಖರೀದಿ ಉತ್ತೇಜಿಸುವ ಉದ್ದೇಶದಿಂದ ಎಲ್ಲ ಸ್ವತ್ತುಗಳ ಮಾರಾಟ ಮತ್ತು ಖರೀದಿ ಮಾರ್ಗಸೂಚಿ ದರದಲ್ಲಿ ಶೇ 10 ರಷ್ಟು ರಿಯಾಯಿತಿ ಘೋಷಿಸಲಾಯಿತು. ಕೃಷಿ ಜಮೀನು, ಕೃಷಿಯೇತರ ಜಮೀನು, ನಿವೇಶನ, ಅಪಾರ್ಟ್‌ಮೆಂಟ್‌, ಕಟ್ಟಡ ಸೇರಿ ವಿವಿಧ ರೀತಿಯ ಸ್ವತ್ತುಗಳಿಗೆ ಇದು ಅನ್ವಯವಾಗುತ್ತದೆ. ಮಾರ್ಗಸೂಚಿ ದರ ಇಳಿಕೆಯಿಂದ ಮುದ್ರಾಂಕ ಮತ್ತು ನೋಂದಣಿ ಶುಲ್ಕವೂ ಕಡಿಮೆ ಆಗಲಿದೆ. ಇದರಿಂದ ಆಸ್ತಿ ಖರೀದಿದಾರರಿಗೆ ಉಳಿತಾಯವಾಗಲಿದೆ. ಸರ್ಕಾರಕ್ಕೆ ಹೆಚ್ಚು ಆದಾಯ ಸಿಗುತ್ತದೆ ಎಂಬುದು ಸರ್ಕಾರದ ಲೆಕ್ಕಾಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT