ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ದಾಸ್ ಆಯೋಗ ನೀಡಿರುವ ವರದಿಯಲ್ಲಿ ಶಿಫಾರಸು ಮಾಡಿರುವ ‘ಜಾತಿವಾರು ವರ್ಗೀಕರಣ’ವನ್ನು ಮರು ಪರಿಶೀಲಿಸಲು ರಾಜ್ಯ ಸರ್ಕಾರವು ಸಚಿವ ಸಂಪುಟ ಉಪ ಸಮಿತಿ ರಚಿಸುವಂತೆ ಒತ್ತಡ ಹೇರಲು ಬಲಗೈ ಸಮುದಾಯ ಮುಂದಾಗಿದೆ.

ಪರಿಶಿಷ್ಟ ಜಾತಿಯಲ್ಲಿ 101 ಮೂಲ ಜಾತಿಗಳಿವೆ. ಈ ಜಾತಿಗಳನ್ನು ಆಯೋಗವು ಐದು ಗುಂಪುಗಳಾಗಿ ವರ್ಗೀಕರಿಸಿದೆ. ಲಭ್ಯವಿರುವ ಶೇ 17 ಮೀಸಲಾತಿಯನ್ನು ಪ್ರವರ್ಗ ‘ಎ’ಗೆ ಶೇ 1 (ಒಟ್ಟು ಜಾತಿಗಳು 59 ಜಾತಿಗಳು), ಪ್ರವರ್ಗ ‘ಬಿ’ಗೆ ಶೇ 6 (18 ಜಾತಿಗಳು), ಪ್ರವರ್ಗ ‘ಸಿ’ಗೆ ಶೇ 5 (17 ಜಾತಿಗಳು), ಪ್ರವರ್ಗ ‘ಡಿ’ಗೆ ಶೇ 4 (4 ಜಾತಿಗಳು), ಪ್ರವರ್ಗ ‘ಇ’ಗೆ ಶೇ 1ರಂತೆ (3 ಜಾತಿಗಳು) ಹಂಚಿಕೆ ಮಾಡಿದೆ.

ಪರಿಶಿಷ್ಟ ಜಾತಿಯ ಕುಟುಂಬಗಳನ್ನು ಸಮೀಕ್ಷೆ ನಡೆಸಿ ಸಂಗ್ರಹಿಸಿದ ದತ್ತಾಂಶಗಳನ್ನು ವಿಶ್ಲೇಷಿಸಿದ ಆಯೋಗವು, ಪರಿಶಿಷ್ಟ ಜಾತಿಗಳಲ್ಲಿ ಸಮಾನ ಜಾತಿಯ ಉಪ ಜಾತಿಗಳ ಗುಂಪುಗಳನ್ನು ಒಟ್ಟುಗೂಡಿಸಿ ಗುಂಪುಗಳಾಗಿ ಮಾಡಿದೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಹಿಂದುಳಿದಿರುವಿಕೆ, ಸರ್ಕಾರಿ ಉದ್ಯೋಗದಲ್ಲಿ ಪ್ರಾತಿನಿಧ್ಯದ ಮಾನದಂಡಗಳನ್ನು ಅನುಸರಿಸಿ ಈ ವಿಂಗಡಣೆ ಮಾಡಿದೆ. ಯಾವ ಪ್ರವರ್ಗದಲ್ಲಿ ಎಷ್ಟು ಜನಸಂಖ್ಯೆಯಿದೆ, ಪ್ರವರ್ಗದಲ್ಲಿರುವ ಜಾತಿಗಳ ಹಿಂದುಳಿದಿರುವಿಕೆ ಪರಿಗಣಿಸಿ, ಆದ್ಯತೆ ಮೇಲೆ ಆಯೋಗವು ಮೀಸಲಾತಿಯನ್ನು ಹಂಚಿಕೆ ಮಾಡಿದೆ.

ಆದರೆ, ಆಯೋಗದ ಈ ಸಮರ್ಥನೆಯನ್ನು ಒಪ್ಪಲು ನಿರಾಕರಿಸಿರುವ ಪ್ರವರ್ಗ ‘ಸಿ’ಯಲ್ಲಿರುವ ಬಲಗೈ (ಹೊಲೆಯ, ಛಲವಾದಿ ಸಂಬಂಧಿತ) ಸಮುದಾಯಗಳು, ಬಲಗೈ ಜಾತಿಯ ‘ಸಾಮ್ಯತೆ’ಗಳನ್ನು ಹೊಂದಿರುವ ಮೂಲ ಜಾತಿಗಳನ್ನು ಮತ್ತು ಮೂಲ ಜಾತಿ ನಮೂದಿಸದ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ಪ್ರವರ್ಗ ‘ಇ’ಯಲ್ಲಿ ಪಟ್ಟಿ ಮಾಡಿರುವ ಮೂರು ಜಾತಿಗಳನ್ನು ಪ್ರವರ್ಗ ‘ಸಿ’ ಅಡಿಗೆ ತರಬೇಕು ಎಂಬ ವಾದ ಮುಂದಿಟ್ಟಿವೆ. ಆ ಮೂಲಕ, ಪ್ರವರ್ಗ ‘ಸಿ’ಯಲ್ಲಿರುವ ಜಾತಿಗಳ ಸಂಖ್ಯೆ ಮತ್ತು ಜನಸಂಖ್ಯೆಯು ಹೆಚ್ಚಳಗೊಳ್ಳಲಿದೆ. ಅದಕ್ಕೆ ಅನುಗುಣವಾಗಿ ಮೀಸಲಾತಿ ಪ್ರಮಾಣವೂ ಹೆಚ್ಚಳ ಆಗಬೇಕು ಎಂದು ಪ್ರತಿಪಾದಿಸಲು ಮುಂದಾಗಿವೆ.

‘ಮೀಸಲಾತಿಯ ಸವಲತ್ತುಗಳು ತಲುಪದ ಜಾತಿಗಳನ್ನು ಪಟ್ಟಿ ಮಾಡಿರುವ ಆಯೋಗವು ಆ 59 ಜಾತಿಗಳನ್ನು ಪ್ರವರ್ಗ ‘ಎ’ಯಲ್ಲಿ ಪಟ್ಟಿ ಮಾಡಿ ಶೇ 1 ಮೀಸಲಾತಿ ಹಂಚಿಕೆ ಮಾಡಿದೆ. ಆದರೆ, ಈ ಪಟ್ಟಿಯಲ್ಲಿರುವ 16 ಜಾತಿಗಳು (ಒಟ್ಟು ಜನಸಂಖ್ಯೆ 1,38,653) ಮತ್ತು ಪ್ರವರ್ಗ ‘ಬಿ’ಯಲ್ಲಿರುವ (ಎಡಗೈ ಸಂಬಂಧಿತ) ಒಟ್ಟು 18 ಜಾತಿಗಳ ಪೈಕಿ ನಾಲ್ಕು ಜಾತಿಗಳು (ಒಟ್ಟು 2,58,915) ಬಲಗೈ (ಹೊಲೆಯ, ಛಲವಾದಿ) ಸಂಬಂಧಿತ ಜಾತಿಗಳ ಪಟ್ಟಿಯಲ್ಲಿ (ಪ್ರವರ್ಗ ‘ಸಿ’) ಸೇರಬೇಕು’ ಎನ್ನುತ್ತಾರೆ ಛಲವಾದಿ ಮಹಾಸಭಾದ ಡಿ. ಚಂದ್ರಶೇಖರಯ್ಯ.

‘ಅಲ್ಲದೆ, ಪ್ರವರ್ಗ ‘ಇ’ಯಲ್ಲಿ ಆಯೋಗವು ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಕರ್ನಾಟಕ ಎಂಬ ಮೂರು ಜಾತಿಗಳ (ಒಟ್ಟು ಜನಸಂಖ್ಯೆ 4,74,954) ಗುಂಪನ್ನು ಪಟ್ಟಿ ಮಾಡಿದೆ. ಆದರೆ, ಈ ಮೂರೂ ಜಾತಿಗಳ ಗುಂಪಿನಲ್ಲಿ ಬರುವ ಎಲ್ಲರೂ ಹೊಲೆಯ, ಛಲವಾದಿ ಸೇರಿದಂತೆ ಬಲಗೈ ಸಂಬಂಧಿತ ಜಾತಿಯವರು. ಹೀಗೆ, ಬಲಗೈ ಸಂಬಂಧಿತ ಜಾತಿಗಳನ್ನು ಸೇರಿಸಿದರೆ 8,72,522 ಜನಸಂಖ್ಯೆ ಆಗಲಿದೆ. ಆಯೋಗವು ತನ್ನ ವರದಿಯಲ್ಲಿ ಪ್ರವರ್ಗ ‘ಸಿ’ಯಲ್ಲಿ (ಬಲಗೈ) ಈಗಾಗಲೇ 17 ಜಾತಿಗಳನ್ನು (ಒಟ್ಟು ಜನಸಂಖ್ಯೆ 30,08,633) ಪಟ್ಟಿ ಮಾಡಿದೆ. ಈ ಪ್ರವರ್ಗಕ್ಕೆ ಇತರ ಗುಂಪುಗಳಲ್ಲಿರುವ ಬಲಗೈ ಸಂಬಂಧಿತ ಜಾತಿಗಳ ಜನಸಂಖ್ಯೆಯನ್ನೂ ಸೇರಿಸಿದರೆ ಒಟ್ಟು 38,81,155 ಆಗಲಿದೆ. ಅಲ್ಲದೆ, ಸಮೀಕ್ಷೆಯ ವೇಳೆ ನಾನಾ ಕಾರಣಗಳಿಗೆ ಸುಮಾರು 8 ಲಕ್ಷ ಮಕ್ಕಳು ಗಣತಿಯಲ್ಲಿ ಸೇರಿಲ್ಲ’ ಎಂದೂ ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.