ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿಗಳಿಗೆ ಪ್ರೀತಿ ತೋರುತ್ತಿದ್ದ ವಿಶಾಲಾಕ್ಷಿದೇವಿ

ಬಂಡೀಪುರದ ಬಳಿಯ ಜಮೀನಿನಲ್ಲಿ ಮೂರು ಆನೆಗಳನ್ನು ಸಾಕಿದ್ದರು
Last Updated 19 ಅಕ್ಟೋಬರ್ 2018, 14:40 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಮೈಸೂರು ರಾಜ ವಂಶಸ್ಥ ದಿವಂಗತ ಶ್ರೀಕಂಠದತ್ತ ಒಡೆಯರ್ ಅವರ ಸಹೋದರಿ, ಶುಕ್ರವಾರ ನಿಧನ ಹೊಂದಿದ ವಿಶಾಲಾಕ್ಷಿ ದೇವಿ ಅವರಿಗೆ ಕಾಡು ಪ್ರಾಣಿಗಳೆಂದರೆ ಅಚ್ಚುಮೆಚ್ಚು.ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಖೆಡ್ಡಾಕ್ಕೆ ಬಿದ್ದು ಅನಾಥವಾಗಿದ್ದ ಮೂರು ಆನೆ ಮರಿಗಳನ್ನು ಪ್ರೀತಿಯಿಂದ ಸಾಕಿ ಸಲಹಿ, ಅರಣ್ಯ ಇಲಾಖೆಗೆ ಒಪ್ಪಿಸಿದ್ದರು.

ಅರಣ್ಯವನ್ನು, ಪ್ರಾಣಿಗಳನ್ನು ಹೆಚ್ಚು ಇಷ್ಟಪಡುತ್ತಿದ್ದ ಅವರು ಬಂಡೀಪುರ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿರುವ ಮಂಗಲ ಗ್ರಾಮದಲ್ಲಿ ಟಸ್ಕರ್‌ ಟ್ರಯಲ್ಸ್‌ ಎಂಬ ರೆಸಾರ್ಟ್‌ ಅನ್ನು ನಡೆಸುತ್ತಿದ್ದರು. ಸುಮಾರು 19 ವರ್ಷಗಳ ಕಾಲ ಇಲ್ಲಿ ಅವರು ನೆಲೆಸಿದ್ದರು.

2001ರ ಏಪ್ರಿಲ್ ತಿಂಗಳಲ್ಲಿ ಕಾಡಿನ ಆನೆಗಳ ಖೆಡ್ಡಾಗಳಲ್ಲಿ ಒಂದು ತಿಂಗಳ ಅಂತರದಲ್ಲಿ ಮೂರು ಸಣ್ಣ ಮರಿಗಳು ವಿವಿಧ ಜಾಗಗಳಲ್ಲಿ (1 ತಿಂಗಳ ಮರಿಗಳು) ಇಲಾಖೆಗೆ ಸಿಕ್ಕಿದ್ದವು. ಅವುಗಳನ್ನು ಸಾಕುವುದಕ್ಕಾಗಿ ಇಲಾಖೆಯ ಅಧಿಕಾರಿಗಳು ವಿಶಾಲಾಕ್ಷಿ ದೇವಿ ಅವರಿಗೆ ಒಪ್ಪಿಸಿದ್ದರು. ಅವರು ಎಂಟುವರ್ಷಗಳ ಕಾಲ ಮೂರು ಮರಿಗಳನ್ನೂ ಸಾಕಿ 2009ರಲ್ಲಿ ಇಲಾಖೆಗೆ ಹಸ್ತಾಂತರಿಸಿದ್ದರು.

ಕಾವಾಡಿ ಮತ್ತು ಆನೆ ಮರಿಗಳಿಗೆ ಆಹಾರಗಳನ್ನು ಇಲಾಖೆಯವರೇ ಒದಗಿಸುತ್ತಿದ್ದರು. ಒಂದು–ಒಂದೂವರೆ ತಿಂಗಳ ಮರಿಗಳಿಗೆ ವಿಶಾಲಾಕ್ಷಿ ದೇವಿ ಅವರುಬಾಟಲಿಗಳಲ್ಲಿ ಹಾಲನ್ನು ನೀಡಿ ಬೆಳೆಸಿದ್ದರು.ಬಳಿಕ ಒಬ್ಬನನ್ನು ಆನೆಗಳಿಗೆ ಆಹಾರವನ್ನು ತರಲು ನೇಮಿಸಿಕೊಂಡು ಒಂದು ಆಟೋವನ್ನು ಖರೀದಿ ಮಾಡಿ ದಿನನಿತ್ಯ ಅವುಗಳಿಗೆ ಕಬ್ಬು, ಬೆಲ್ಲ, ಜೋಳದ ಹುಲ್ಲುಗಳನ್ನು ಪಟ್ಟಣದಿಂದ ತರಿಸಿ ಕೊಡುತ್ತಿದ್ದರು. ಇಲಾಖೆಯವರು ಕೆಲ ಪದಾರ್ಥಗಳನ್ನು ನೀಡುತ್ತಿದ್ದರು.

ಆನೆಗಳನ್ನು ಇಲಾಖೆಗೆ ಒಪ್ಪಿಸಿದ ನಂತರವೂ ಆಗಾಗ್ಗೆ ಬಂದು‌ಅವುಗಳ ಯೋಗಕ್ಷೇಮ ವಿಚಾರಿಸುತ್ತಿದ್ದರು.ಈ ಆನೆಗಳು ಇವರ ಬಳಿ ಬೆಳೆಯುತ್ತಿದ್ದಾಗ, ಮಾವುತರಿಗಿಂತ ಹೆಚ್ಚು ಇವರ ಮಾತನ್ನೇ ಚೆನ್ನಾಗಿ ಕೇಳುತ್ತಿದ್ದವು.

‘ಒಂದು ಭಾರಿ ಆನೆ ಮೇಯುತ್ತಿದ್ದಾಗ ನೋಡಲು ಹೋದಾಗ ಇವರು ಸಾಕಿದ್ದ ಆನೆಯೊಂದು ಕಾಡಾನೆಯನು ನೋಡಿ ಹೆದರಿ ಓಡಿ ಇವರತ್ತ ಬರುತ್ತಿತ್ತು. ಅದು ವಿಶಾಲಾಕ್ಷಿ ದೇವಿಯವರ ಮೇಲೆ ದಾಳಿ ಮಾಡಬಹುದು ಎಂದು ಹೆದರಿದ್ದೆವು. ಆದರೆ, ಆನೆ ಇವರ ಬಳಿ ಬಂದು ನಿಂತಿತು. ಎಲ್ಲರೂ ಭಯಭೀತರಾಗಿದ್ದರೆ, ಇವರಿಗೆ ಭಯವಾಗಿರಲಿಲ್ಲ’ ಎಂದು ವಿಶಾಲಾಕ್ಷಿದೇವಿ ಅವರ ಬಳಿ ಕೆಲಸ ಮಾಡುತ್ತಿದ್ದ ಆಗಸ್ಟಿನ್‌ ಪಿಂಟು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲವು ದಿನಗಳಿಂದ ಅನಾರೋಗ್ಯದ ಕಾರಣ ಅವರು‌ಇತ್ತ ಬಂದಿರಲಿಲ್ಲ.ಚೆನ್ನಾಗಿದ್ದಾಗ ಎರಡು ಮೂರು ತಿಂಗಳಿಗೊಮ್ಮೆ ಬಂದು ನೋಡುತ್ತಿದ್ದರು. ಆವಾಗಲೂ ಆನೆಗಳು ಅವರನ್ನು ಮರೆತಿರಲಿಲ್ಲ. ಹೆಚ್ಚು ಪ್ರೀತಿಯಿಂದ ವರ್ತಿಸುತ್ತಿದ್ದವು’ ಎಂದು (ಪದ್ಮಜಾ, ಪೃಥ್ವಿರಾಜ್ ಮತ್ತು ಮೃತ್ಯುಂಜಯ) ಅವರ ಆನೆಗಳನ್ನು ನೋಡಿಕೊಳ್ಳುತ್ತಿರುವ ಮಾವುತರೊಬ್ಬರು ತಿಳಿಸಿದರು.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT