ಬೆಂಗಳೂರು: ಆಯುಷ್ನ ವಿವಿಧ ಕೋರ್ಸ್ಗಳಿಗೆ ನಡೆದ ಮೂರನೇ ಸುತ್ತಿನ ಸೀಟು ಹಂಚಿಕೆಯ ನಂತರ ಉಳಿದಿರುವ ಸರ್ಕಾರಿ ಕೋಟಾದ ಸೀಟುಗಳ ಹಂಚಿಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ನೇರ ಸಂದರ್ಶನ ನಡೆಸಲಿದೆ.
ಆಯುರ್ವೇದದಲ್ಲಿ 35 ಸೀಟುಗಳು, ಯುನಾನಿ–33, ಹೋಮಿಯೋಪಥಿ–44, ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಕೋರ್ಸ್ಗಳಲ್ಲಿ 19 ಸೇರಿದಂತೆ ಒಟ್ಟು 131 ಸೀಟುಗಳು ಲಭ್ಯವಿವೆ.
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಸೋಮವಾರ (ಅ.20) ಸಂಜೆ 5 ಗಂಟೆ ಒಳಗಾಗಿ ಬೆಂಗಳೂರಿನಲ್ಲಿರುವ ಆಯುಷ್ ನಿರ್ದೇಶನಾಲಯದಿಂದ ಪಡೆದು ಅ.21ರ (ಮಂಗಳವಾರ) ಸಂಜೆ 5.30ರ ಒಳಗಾಗಿ ನಿರ್ದೇಶನಾಲಯಕ್ಕೆ ದೃಢೀಕೃತ ಅಂಕಪಟ್ಟಿಯೊಂದಿಗೆ ಸಲ್ಲಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗೆ ಪ್ರಾಧಿಕಾರದ ವೆಬ್ಸೈಟ್ kea.kar.nic.in ನೋಡಬಹುದು.