ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏ.1ರಿಂದ ಆಭರಣ ನಗದು ಖರೀದಿಗೆ ತೆರಿಗೆ

Last Updated 19 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ₹2 ಲಕ್ಷಕ್ಕಿಂತ ಹೆಚ್ಚು ನಗದು ನೀಡಿ ಆಭರಣ ಖರೀದಿಸಿದರೆ ಶೇ 1ರಷ್ಟು ತೆರಿಗೆ ವಸೂಲಿ (ಮೂಲದಲ್ಲಿ ತೆರಿಗೆ ಸಂಗ್ರಹ–ಟಿಸಿಎಸ್‌) ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ.

2017ರ ಹಣಕಾಸು ಮಸೂದೆ ಅಂಗೀಕಾರವಾದರೆ ಆಭರಣ ಸಾಮಾನ್ಯ ಸರಕುಗಳ ಪಟ್ಟಿ ಸೇರುತ್ತದೆ. ಈ ಪಟ್ಟಿಯಲ್ಲಿರುವ ವಸ್ತುಗಳನ್ನು ₹ 2 ಲಕ್ಷಕ್ಕಿಂತ ಹೆಚ್ಚು ನಗದು ನೀಡಿ ಖರೀದಿಸಿದರೆ ಅದಕ್ಕೆ ಶೇ 1ರಷ್ಟು ತೆರಿಗೆ ನೀಡಬೇಕಾಗುತ್ತದೆ.

ಈವರೆಗೆ ₹5 ಲಕ್ಷಕ್ಕಿಂತ ಹೆಚ್ಚು ಬೆಲೆಯ ಆಭರಣಗಳನ್ನು ನಗದು ನೀಡಿ ಖರೀದಿಸಿದರೆ ಮಾತ್ರ ಶೇ 1ರಷ್ಟು ತೆರಿಗೆ ನೀಡಬೇಕಿತ್ತು.

ಈಗ ₹3 ಲಕ್ಷಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸುವುದು ಶಿಕ್ಷಾರ್ಹ ಅಪರಾಧ. ಹಾಗಾಗಿ ಆಭರಣ ಖರೀದಿಯ ನಿಯಮ ಬದಲಾಯಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT