ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲ್ಲೂರಿನಲ್ಲಿ 19 ಸೆಂ.ಮೀ ಮಳೆ

Last Updated 9 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿಯಲ್ಲಿ ಮುಂಗಾರು ಚುರುಕುಗೊಂಡಿದೆ. ಉತ್ತರ ಒಳನಾಡಿನಲ್ಲಿ ಮುಂಗಾರು ದುರ್ಬಲವಾಗಿದೆ. ದಕ್ಷಿಣ ಒಳನಾಡು ಹಾಗೂ  ಒಳನಾಡಿನಲ್ಲಿ ಮಳೆಯಾಗಿದೆ.

ಕೊಲ್ಲೂರಿನಲ್ಲಿ ಅತಿ ಹೆಚ್ಚು 19 ಸೆಂ.ಮೀ ಮಳೆಯಾಗಿದೆ. ಆಗುಂಬೆ 17, ಮೂಡಬಿದಿರೆ 15, ಸುಳ್ಯ, ಕಾರ್ಕಳ, ಸಿದ್ದಾಪುರ (ಉಡುಪಿ ಜಿಲ್ಲೆ) 13, ಮಂಗಳೂರು, ಪುತ್ತೂರು, ಲಿಂಗನಮಕ್ಕಿ, ಶೃಂಗೇರಿ 10, ಪಣಂಬೂರು, ಬಂಟ್ವಾಳ, ಮಾಣಿ, ಶಿರಾಲಿ, ಕಮ್ಮರಡಿ 9, ಬೆಳ್ತಂಗಡಿ, ಭಟ್ಕಳ, ಜಯಪುರ 8, ಧರ್ಮಸ್ಥಳ, ಉಪ್ಪಿನಂಡಿ, ಕೋಟ, ಗೇರುಸೊಪ್ಪ, ಭಾಗಮಂಡಲ 7, ಮಂಗಳೂರು ವಿಮಾನ ನಿಲ್ದಾಣ, ಉಡುಪಿ, ನಿಲ್ಕುಂದ, ತೀರ್ಥಹಳ್ಳಿ, ಕೊಪ್ಪ 6, ಮೂಲ್ಕಿ, ಸುಬ್ರಹ್ಮಣ್ಯ, ಕುಂದಾಪುರ, ಕದ್ರಾ, ಮಡಿಕೇರಿ, ಮೂರ್ನಾಡು, ತಾಳಗುಪ್ಪ, ಬಾಳೆಹೊನ್ನೂರು 5, ಹೊನ್ನಾವರ, ಗೋಕರ್ಣ, ಜೋಯಿಡಾ, ನಾಪೋಕ್ಲು, ಕಳಸ 4, ಸಿದ್ದಾಪುರ (ಉತ್ತರ ಕನ್ನಡ ಜಿಲ್ಲೆ), ಗಂಗಾವತಿ, ಪೊನ್ನಂಪೇಟೆ, ವಿರಾಜಪೇಟೆ, ಸಾಗರ, ಕಂಪ್ಲಿ 3, ಕುಮಟಾ, ಅಂಕೋಲಾ, ಬನವಾಸಿ, ಶಿರಸಿ, ಯಲ್ಲಾಪುರ, ಜಗಲಬೇಟ, ಕಾರವಾರ, ಔರಾದ್, ಚಿತ್ತಾಪುರ, ಮಾದಾಪುರ, ತ್ಯಾಗರ್ತಿ, ಅರಸಾಳು, ಹುಂಚದಕಟ್ಟೆ, ಶಿರಾಳಕೊಪ್ಪ, ಕೊಟ್ಟಿಗೆಹಾರ, ಎನ್.ಆರ್.ಪುರ, ಸಕಲೇಶಪುರ, ಗುಬ್ಬಿ, ರಾಮನಗರ 2, ಕಲಘಟಗಿ, ಜೇವರ್ಗಿ, ಹಾರಂಗಿ , ಆನವಟ್ಟಿ, ಚಿಕ್ಕಮಗಳೂರಿನಲ್ಲಿ 1 ಸೆಂ.ಮೀ ಮಳೆಯಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳ ಕಾಲ ರಾಜ್ಯದ ಕರಾವಳಿಯ ಸೇರಿದಂತೆ ದಕ್ಷಿಣ ಮತ್ತು ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT