ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಶಾಲೆಗೆ ಲಗಾಮು

ಸಂದರ್ಶನಕ್ಕೆ ನಿಷೇಧ: ಪ್ರವೇಶಕ್ಕೆ ವೇಳಾಪಟ್ಟಿ
Last Updated 11 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ಶಾಲೆಗಳು ಮನಬಂದಂತೆ ಪ್ರವೇಶ ಪ್ರಕ್ರಿಯೆ ನಡೆ­ಸು­ವುದನ್ನು ನಿಯಂತ್ರಿಸಲು ಸಾರ್ವ­ಜನಿಕ ಶಿಕ್ಷಣ ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ.

ಇದರನ್ವಯ 2014–15ನೇ ಸಾಲಿನ ಪ್ರವೇಶ ಪ್ರಕ್ರಿಯೆ ಮಾರ್ಚ್‌ 1ರಿಂದ ಆರಂಭವಾಗಲಿದ್ದು, ಏಪ್ರಿಲ್‌ 21ರಂದು  ದಾಖಲಾತಿ ಮುಕ್ತಾಯ­ವಾಗಲಿದೆ (ಪಟ್ಟಿ ನೋಡಿ).

ನಗರ ಪ್ರದೇಶಗಳ ಬಹುತೇಕ ಖಾಸಗಿ ಶಾಲೆಗಳು ಅಕ್ಟೋಬರ್‌­ನಿಂದಲೇ ಪ್ರವೇಶ ಪ್ರಕ್ರಿಯೆ ಆರಂಭಿಸಿ ಜನವರಿ ವೇಳೆಗೆ ದಾಖಲಾತಿ  ಪೂರ್ಣ­ಗೊಳಿಸುತ್ತವೆ. ಶಾಲಾ ಅಭಿವೃದ್ಧಿ ಶುಲ್ಕ ಹೆಸರಿನಲ್ಲಿ ಸಾವಿರಾರು ರೂಪಾಯಿ ವಂತಿಗೆ ಪಡೆಯುತ್ತವೆ ಎಂಬ ದೂರು­ಗಳು ಪೋಷಕರಿಂದ ಕೇಳಿಬಂದಿವೆ.

ಈ ಬಗ್ಗೆ ತಡವಾಗಿ ಎಚ್ಚೆತ್ತು­ಕೊಂಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಮೊದಲ ಬಾರಿಗೆ ಖಾಸಗಿ ಶಾಲೆಗಳಿಗೆ ಅನ್ವಯ ಆಗುವಂತೆ ಪ್ರವೇಶ ವೇಳಾಪಟ್ಟಿ ಪ್ರಕಟಿಸಿದೆ.

ದಂಡ: ಪ್ರವೇಶ ನೀಡುವ ಸಂದರ್ಭ­ದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಪರೀಕ್ಷೆ ಅಥವಾ ಸಂದ­ರ್ಶನ ನಡೆಸುವುದನ್ನು ನಿಷೇಧಿಸ­ಲಾ­ಗಿದೆ. ಇದನ್ನು ಉಲ್ಲಂಘಿಸುವ ಶಾಲೆ­ಗಳಿಗೆ ಮೊದಲ ಬಾರಿ ₨ 25,000 ದಂಡ ವಿಧಿಸಲಾಗುತ್ತದೆ.

ಎರಡನೇ ಬಾರಿಗೆ ತಪ್ಪು ಮಾಡಿದರೆ ₨ 50,000 ದಂಡ ವಿಧಿಸಲಾಗುವುದು ಎಂದು ಸಾರ್ವ­­ಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಕ್ರಮದ ಎಚ್ಚರಿಕೆ: ಶಿಕ್ಷಣ ಹಕ್ಕು ಕಾಯ್ದೆ ಅಡಿ ಶೇ 25ರಷ್ಟು ಉಚಿತ ಸೀಟುಗಳ ಪ್ರವೇಶಕ್ಕೆ ಈಗಾಗಲೇ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಇನ್ನುಳಿದ ಶೇ 75ರಷ್ಟು ಸೀಟುಗಳ ಪ್ರವೇಶಕ್ಕೂ ಈಗ ವೇಳಾಪಟ್ಟಿ ಪ್ರಕಟಿಸಲಾಗಿದೆ.

ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ (ಖಾಸಗಿ) ಈ ವೇಳಾಪಟ್ಟಿ ಅನ್ವಯವಾಗಲಿದೆ. ಇದರ ಪ್ರಕಾರ ಪ್ರವೇಶ ನೀಡದೆ ಇರುವ ಶಾಲೆಗಳ ಮೇಲೆ ಕ್ರಮ ಕೈಗೊ­ಳ್ಳ­ಲಾಗುವುದು ಎಂದು ಎಚ್ಚರಿಸಲಾಗಿದೆ.

ಪ್ರವೇಶ ಅರ್ಜಿಗೆ ಗರಿಷ್ಠ ₨5 ಹಾಗೂ ಕೈಪಿಡಿಗೆ ಗರಿಷ್ಠ ₨20 ಪಡೆ­ಯಬಹುದು. ಅಂಕಪಟ್ಟಿ, ವರ್ಗಾವಣೆ ಪತ್ರ, ನಡತೆ ಪ್ರಮಾಣ ಪತ್ರ ಮತ್ತಿತರ ಪ್ರಮಾಣ ಪತ್ರಗಳಿಗೆ ₨ 25 ಪಡೆಯಬಹುದು.

ಶುಲ್ಕ: ಅನುದಾನಿತ ಶಾಲೆಗಳು 1ರಿಂದ 5ನೇ ತರಗತಿವರೆಗಿನ ವಿದ್ಯಾ­ರ್ಥಿ­ಗಳಿಂದ ಬೋಧನೇತರ, ಬೋಧನೆ ಮತ್ತು ವಿಶೇಷ ಅಭಿವೃದ್ಧಿ ಶುಲ್ಕ ಪಡೆಯುವಂತಿಲ್ಲ. ಅನುದಾನ ರಹಿತ ಶಾಲೆಗಳು ಈ ತರಗತಿಗಳ ವಿದ್ಯಾರ್ಥಿ­ಗಳಿಂದ ₨ 600 ವರೆಗೆ ವಿಶೇಷ ಅಭಿವೃದ್ಧಿ ಶುಲ್ಕ ಪಡೆಯ­ಬಹುದು.

ಬೋಧನಾ ಶುಲ್ಕವನ್ನು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್‌ 2(ಬಿ) ಅನ್ವಯ ಪಡೆಯಬೇಕು. ಬೋಧ­ನೇತರ ಶುಲ್ಕ ಪಡೆಯು­ವಂತಿಲ್ಲ. ಅನುದಾನಿತ ಶಾಲೆಗಳು 6ರಿಂದ 8ನೇ ತರಗತಿಯವರೆಗೆ ಬೋಧನಾ ಶುಲ್ಕ ಪಡೆಯುವಂತಿಲ್ಲ ಎಂದು ಸುತ್ತೋಲೆಯಲ್ಲಿ ಕಟ್ಟುನಿಟ್ಟಾಗಿ ತಿಳಿಸಲಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT