ಹುಬ್ಬಳ್ಳಿ: ಗುಜರಾತ್ನ ಅಹ್ಮದಾಬಾದ್ನಲ್ಲಿ ಮನೆ ಕೆಲಸ ಮಾಡುತ್ತಿದ್ದ ಕರ್ನಾಟಕ ಮೂಲದ ರೇಖಾ ಅಲಿಯಾಸ್ ಶಹನಾಜ್ ಎಂಬ ಮಹಿಳೆ ಮನೆ ಮಾಲೀಕರ 5 ವರ್ಷದ ಮಗಳನ್ನು ಅಪಹರಿಸಿಕೊಂಡು ಬಂದಿರುವ ಶಂಕೆ ಇದ್ದು, ಹುಬ್ಬಳ್ಳಿ ಹಾಗೂ ಗದಗ ಜಿಲ್ಲೆಗಳಲ್ಲಿ ಓಡಾಡುತ್ತಿರುವುದು ಮೊಬೈಲ್ ಕರೆ ವಿವರ ಪರಿಶೀಲಿಸಿದಾಗ ಗೊತ್ತಾಗಿದೆ.

ಅಕ್ಟೋಬರ್ 14ರಂದು ಮಗಳು ಕಿಂಜಲ್ಳನ್ನು ರೇಖಾ ಅಪಹರಿಸಿಕೊಂಡು ಹೋಗಿದ್ದಾಳೆ ಎಂದು ಮನೆ ಒಡತಿ ಮನಿಷಾ ಗುಜರಾತ್ನ ಮಣಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

'ರೇಖಾಳ ಮೊಬೈಲ್ ಕರೆ ವಿವರಗಳನ್ನು ಪರಿಶೀಲಿಸಿದಾಗ ನವೆಂಬರ್ 25ರಿಂದ 30ರವರೆಗೆ ಆಕೆ ಹುಬ್ಬಳ್ಳಿಯ ಅರವಿಂದ ನಗರ, ನವಲಗುಂದ, ನರಗುಂದ ಹಾಗೂ ಗದಗ ನಗರಗಳ ವಿವಿಧ ಟವರ್ಗಳ ವ್ಯಾಪ್ತಿಯಲ್ಲಿ ಓಡಾಡಿರುವುದು ಗೊತ್ತಾಗಿದೆ’ ಎಂದು ಮಣಿನಗರ ಇನ್ಸ್ಪೆಕ್ಟರ್ ಚೇತನ್ ಜಡೇಜಾ ‘ಪ್ರಜಾವಾಣಿ’ಗೆ ತಿಳಿಸಿದರು.

'ರೇಖಾ ಹಾಗೂ ಕಿಂಜಲ್ಳನ್ನು ಪತ್ತೆ ಹಚ್ಚಿದವರಿಗೆ ₹ 10 ಸಾವಿರ ಬಹುಮಾನ ನೀಡಲಾಗುವುದು. 98793 24147 ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ನೀಡಬಹುದು' ಎಂದು ಅವರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.