ಬೆಂಗಳೂರು: ಹಿರಿಯ ಪತ್ರಕರ್ತ ಡಿ.ಸುಂದರರಾಜು (81) ಸೋಮವಾರ ಸಂಜೆ ನಿಧನರಾದರು.
ಅವರಿಗೆ ಪತ್ನಿ ಡಾ.ಕಾಂತಾ, ಪುತ್ರಿ ಅಂಜನಾ ಇದ್ದಾರೆ.‘ಜನವಾಣಿ’ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿದ ಅವರು ಅಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ್ದರು. ಆ ನಂತರ ‘ಸಂಜೆವಾಣಿ’ ಸೇರಿದರು. ಸುದ್ದಿ ಸಂಪಾದಕರಾಗಿ ಕಳೆದ ವರ್ಷ ನಿವೃತ್ತಿ ಹೊಂದಿದ್ದರು.