ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ: ಶ್ರೀಕಂಠದತ್ತ ಒಡೆಯರ್‌ಗೆ ರೂ. 25 ಲಕ್ಷ ಗೌರವಧನ?

Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮೈಸೂರು: ದಸರಾ ಮಹೋತ್ಸವದಲ್ಲಿ ಭಾಗವಹಿಸುವ ರಾಜವಂಶಸ್ಥ ಶ್ರೀಕಂಠ­ದತ್ತ ನರಸಿಂಹರಾಜ ಒಡೆಯರ್‌ ಅವರಿಗೆ ನೀಡುವ ಗೌರವಧನವನ್ನು ಈ ಬಾರಿ ರೂ. 25 ಲಕ್ಷ ಕ್ಕೆ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ.

ಕಳೆದ ವರ್ಷ ರೂ. 20 ಲಕ್ಷ ನೀಡ­ಲಾಗಿತ್ತು. ಈ ಬಾರಿ ಯೂ ರೂ. 20 ಲಕ್ಷ ನೀಡಲು ದಸರಾ ಮಹೋತ್ಸವ ಸಮಿತಿ ನಿರ್ಧರಿಸಿತ್ತು. ‘ಆದರೆ ರಾಜ ವಂಶಸ್ಥ­ರಾದ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್‌ ಆರ್ಥಿಕವಾಗಿ ತೊಂದರೆ­ಯಲ್ಲಿ ಇರುವುದರಿಂದ ಈ ಬಾರಿ ರೂ. 25 ಲಕ್ಷ ನೀಡಬೇಕೆಂದು ಅಂದುಕೊಂಡಿ­ದ್ದೇವೆ. ಈ ಕುರಿತು ಸೆ. 20ರಂದು ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವ­ರೊಂದಿಗೆ ಚರ್ಚಿಸಿ ಪ್ರಕಟಿಸುತ್ತೇವೆ’ ಎಂದು ಜಿಲ್ಲಾ ಉಸ್ತು ವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ‘ಪ್ರಜಾವಾಣಿ’ಗೆ ದೂರವಾಣಿ ಮೂಲಕ ಗುರುವಾರ ತಿಳಿಸಿದರು.

‘ಸೆ. 20ರಂದು ಸಂಜೆ 3.50 ಗಂಟೆಗೆ ವಿಧಾನಸೌಧದಲ್ಲಿ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರನ್ನು ದಸರಾ ಮಹೋತ್ಸವಕ್ಕೆ ಅಧಿಕೃತವಾಗಿ ಆಹ್ವಾನಿಸ ಲಾಗುತ್ತದೆ. ರಾತ್ರಿ 9 ಗಂಟೆಗೆ ದಸರಾ ಮಹೋ ತ್ಸವ ಉದ್ಘಾಟಿ­ಸಲು  ಸಾಹಿತಿ ಡಾ.­ಚಂದ್ರಶೇಖರ ಕಂಬಾರ ಅವರನ್ನು ಆಹ್ವಾನಿಸಲಾಗುತ್ತದೆ.  ಸೆ. 21ರಂದು ಬೆಳಿಗ್ಗೆ ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್ ಅವರನ್ನು ಆಹ್ವಾನಿ­ಸುತ್ತೇವೆ. ಈ ಸಂದರ್ಭದಲ್ಲಿ ಮೈಸೂರು ಪಾಲಿಕೆ ಮೇಯರ್‌ ಎನ್‌.ಎಂ. ರಾಜೇಶ್ವರಿ, ಜಿಲ್ಲಾಧಿಕಾರಿ ಸಿ. ಶಿಖಾ ಮೊದಲಾದವರು ಹಾಜರಿರುತ್ತಾರೆ’ ಎಂದು ಅವರು ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT