ಶ್ರೀರಂಗಪಟ್ಟಣ: ಕೇಂದ್ರ ಸಚಿವ ಅನಂತಕುಮಾರ್ ಅಸ್ಥಿಯನ್ನು ಪಟ್ಟಣದ ಪಶ್ಚಿಮವಾಹಿನಿ ಬಳಿ, ಕಾವೇರಿ ನದಿಯಲ್ಲಿ ಬುಧವಾರ ವಿಸರ್ಜಿಸಲಾಯಿತು.

ಅನಂತಕುಮಾರ್ ಸಹೋದರ ನಂದಕುಮಾರ್ ಬ್ರಾಹ್ಮಣ ಸಂಪ್ರದಾಯದ ವಿಧಿ, ವಿಧಾನದಂತೆ ಅಸ್ಥಿ ವಿಸರ್ಜಿಸಿದರು. ಬೆಂಗಳೂರಿನಿಂದ ತಂದ ಅಸ್ಥಿ ತುಂಬಿದ್ದ ಕುಡಿಕೆಯನ್ನು ನದಿಯ ದಡದಲ್ಲಿಟ್ಟು ಸಂಸ್ಕಾರ ಮಾಡಲಾಯಿತು. ಗೋಮಯ, ತುಪ್ಪ, ಮೊಸರು, ಹಾಲು, ಎಳನೀರುಗಳಿಂದ ಅಸ್ಥಿ ಕುಡಿಕೆಗೆ ಸಂಸ್ಕಾರ ಮಾಡಲಾಯಿತು. ಪೂಜೆ ಸಲ್ಲಿಸಿದ ಬಳಿಕ ನದಿಯಲ್ಲಿ ವಿಸರ್ಜಿಸಲಾಯಿತು. ‘ಅನಂತಕುಮಾರ್ ಅಮರ್ ರಹೇ....’ ಘೋಷಣೆಗಳು ಮೊಳಗಿದವು.

ಸಂಸದರಾದ ಪ್ರಹ್ಲಾದ ಜೋಶಿ, ಪ್ರತಾಪ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಉದಯ ಗರುಡಾಚಾರ್, ಎಲ್.ನಾಗೇಂದ್ರ, ಬಿಜೆಪಿ ಮುಖಂಡರಾದ ಕೆ.ಬಲರಾಂ, ಕೆ.ಎಸ್.ನಂಜುಂಡೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.