ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕೆಟ್ ಮನಿ ಹಣದಲ್ಲಿ ಕಾರ್ ರೆಡಿ

Last Updated 3 ಸೆಪ್ಟೆಂಬರ್ 2013, 19:32 IST
ಅಕ್ಷರ ಗಾತ್ರ

ಬ್ರಹ್ಮಾವರ (ಉಡುಪಿ ಜಿಲ್ಲೆ): ದಿನನಿತ್ಯ ಏರುತ್ತಿರುವ ಪೆಟ್ರೋಲ್ ಬೆಲೆಯಿಂದ ವಾಹನ ಸವಾರರು ಪರದಾಡುತ್ತಿರುವ ಇಂದಿನ ಸ್ಥಿತಿಗೆ ಪರಿಹಾರವೆಂಬಂತೆ ಇಲ್ಲೊಬ್ಬ ಹುಡುಗ ಅಪ್ಪ ಕೊಟ್ಟ ಪಾಕೆಟ್ ಮನಿಯಲ್ಲಿ ತನಗೆ ಬೇಕಾದ ವಾಹನ ತಾನೇ ಸಿದ್ಧ ಪಡಿಸಿಕೊಂಡಿದ್ದಾರೆ.

ಗ್ರಾಮೀಣ ಭಾಗದಲ್ಲಿ ವಾಸವಾಗಿರುವ ಚಾಂತಾರಿನ ಶರತ್, ಎದುರಗಡೆ ಎರಡು ಟಯರ್, ಹಿಂದೆ ಒಂದು ಟಯರ್, 90 ಕಿ.ಮೀ ವೇಗ, ಮೂವತ್ತು ಕಿಮೀ ಮೈಲೇಜ್ ನೀಡುವ ಕಾರೊಂದನ್ನು ತಯಾರಿಸಿದ್ದಾರೆ. ಬ್ರಹ್ಮಾವರ ಸಮೀಪದ ಚಾಂತಾರಿನ ಶೇಖರ್ ನಾಯ್ಕ ಮತ್ತು ಶೈಲಜಾ ಎಸ್ ನಾಯ್ಕ ದಂಪತಿಯ ಪುತ್ರರಾದ ಶರತ್ ಬ್ರಹ್ಮಾವರದ ಎಸ್.ಎಂ.ಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಚಿಕ್ಕಂದಿನಿಂದ ಹಲವಾರು ಮಾದರಿಗಳನ್ನು ಮಾಡುವ ಆಸಕ್ತಿ ಬೆಳೆಸಿಕೊಂಡ ಅವರು ಬೇಸಿಗೆ ರಜಾ ಬಂತೆಂದರೆ ಇಂತಹ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಮಗ್ನನಾಗುತ್ತಾರೆ.

ಆ ದಿನಗಳಲ್ಲಿ ವಿಜ್ಞಾನದ ಮಾದರಿ ಮಾಡುವ ಗೀಳು. ಏನಾದರೊಂದು ಹೊಸತನ್ನು ಮಾಡಬೇಕೆನ್ನುವ ಆಸಕ್ತಿಯಿಂದ ಮನೆಯವರು ಮೂಗು ಮುರಿದರೂ ತಲೆ ಕೆಡಿಸಿಕೊಳ್ಳದೆ ಕೇವಲ 10 ಸಾವಿರ ವೆಚ್ಚದಲ್ಲಿ ಈ ತ್ರಿಚಕ್ರ ವಾಹನ ಸಿದ್ದಪಡಿಸಿದ್ದಾರೆ. 'ಟ್ರಿಯೋ' ಸೂಪರ್ ಕಾರನ್ನು ತಯಾರಿಸಿ ಗಮನ ಸೆಳೆದಿದ್ದಾರೆ.

ಚೇತಕ್ ಸ್ಕೂಟರ್‌ನ 100 ಸಿಸಿ ಎಂಜಿನ್, ಸ್ಕೂಟಿಯ ಟಯರ್, ಒಂದಿಷ್ಟು ತಗಡು, ಗುಜರಿ ಅಂಗಡಿಯಲ್ಲಿ ಆಯ್ದ ಇತರ ಸಲಕರಣೆಗಳನ್ನು ಜೋಡಿಸಿ ಈ ವಾಹನ ನಿರ್ಮಿಸಿದ್ದಾರೆ. ಇಂತಹ ವಾಹನಗಳನ್ನು ದೇಶ ಕಾಯುವ ಸೈನಿಕರು ಬಳಸಬೇಕು ಅನ್ನೋ ಧ್ಯೇಯವನ್ನು ಶರತ್ ಇರಿಸಿಕೊಂಡಿದ್ದಾರೆ. ತಮ್ಮಷ್ಟೇ ತೂಕದ ಲಗೇಜು ಹೊತ್ತು ತಿರುಗಾಡುವ ಸೈನಿಕರಿಗಾಗಿ ಈ ವಾಹನದಲ್ಲಿ ಇನ್ನಷ್ಟು ಮಾರ್ಪಾಟು ಮಾಡುತ್ತೇನೆ ಎನ್ನುತ್ತಾರೆ.

ಅವರ ಈ ಪ್ರಯೋಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪಾಕೆಟ್ ಮನಿ ಹಣವನ್ನು ದುಂದುವೆಚ್ಚ ಮಾಡದೆ ಕ್ರಿಯಾಶೀಲವಾಗಿ ಉಪಯೋಗಿಸಿ ಮನೆಯವರ ಪ್ರೀತಿಗೂ ಶರತ್ ಪಾತ್ರನಾಗಿದ್ದಾರೆ. ಸುಧಾರಿತ ರೀತಿಮಾಹಿತಿಗೆ sharathnaik33@gmail.com.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT