ಮಹಾರಾಷ್ಟ್ರದ ಪ್ರಮುಖ ಜಾನಪದ ಕ್ರೀಡೆಯಾಗಿರುವ ಮಲ್ಲಕಂಬದ ಕಠಿಣ ಕೌಶಲಗಳನ್ನು ಸೈನಿಕರು ಪ್ರದರ್ಶಿಸಿದರು. ಇದು ನೋಡಲು ರೋಮಾಂಚಕವಾದರೂ ಮಾಡಲು ಮಾತ್ರ ಅಷ್ಟೇ ಅಪಾಯಕಾರಿ. ಮೈದಾನದ ನಟ್ಟ ನಡುವೆ ನೆಟ್ಟ 2 ಮಲ್ಲಕಂಬಗಳ ಮೇಲೆ ಸಿಪಾಯಿ ಪ್ರಶಾಂತ್ ಮತ್ತು ತಂಡವು ಮೊದಲಿಗೆ ಪ್ರೇಕ್ಷಕ ಗಣಕ್ಕೆ ವಂದನೆ ಸಲ್ಲಿಸಿತು. ನಂತರ ಪಿರಮಿಡ್, ಕಮಲ ಹೂ ಮಾದರಿ, ಏಣಿಯಂತಹ ಮಾದರಿಗಳ ಆಸನಗಳನ್ನು ಪ್ರದರ್ಶಿಸಿದರು.