ವಿಜಾಪುರ: ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಅಂಗವಿಕಲರಿಗೆ ಉಚಿತ ಸಾರಿಗೆ ಸೌಕರ್ಯಕ್ಕೆ ಸ್ಥಳೀಯರು ಮುಂದಾಗಿದ್ದಾರೆ. ಆಹ್ವಾನಿತ ಸಾಹಿತಿಗಳು-ಗಣ್ಯರಿಗೆ ಟಾಂಗಾ ಸವಾರಿ ಯೋಗ ಲಭಿಸಲಿದೆ!

ವಿವಿಧೆಡೆಯಿಂದ ಆಗಮಿಸುವ ಅಂಗವಿಕಲರಿಗೆ ಉಚಿತ ವಾಹನ ಸೌಲಭ್ಯ ಕಲ್ಪಿಸಲು `ರಾಜ್ಯ ವಿಕಲಚೇತನರ ಹೋರಾಟ ಸಮಿತಿ'ಯ ಸ್ಥಳೀಯ ಘಟಕ ಮುಂದೆ ಬಂದಿದೆ. ನಗರದ 25 ಮಂದಿ ಅಂಗವಿಕಲ ಯುವಕರು, ತಮ್ಮಂತೆಯೇ ಅಂಗವೈಕಲ್ಯದ ತೊಂದರೆ ಅನುಭವಿಸುತ್ತಿರುವವರಿಗೆ ಈ ಮಾನವೀಯ ಸೇವೆ ನೀಡಲಿದ್ದಾರೆ.

`ವಿಶೇಷ ವಿನ್ಯಾಸದ 25 ಸ್ಕೂಟರ್ಗಳು ನಮ್ಮ ಬಳಿ ಇವೆ. ಈ ಸ್ಕೂಟರ್ಗಳಲ್ಲಿ ತಲಾ ಒಬ್ಬೊಬ್ಬ ಸಹ ಸವಾರರನ್ನು ಕರೆದೊಯ್ಯಲು ಅವಕಾಶವಿದೆ. ರೈಲು ಹಾಗೂ ಬಸ್ ನಿಲ್ದಾಣಗಳಿಂದ ಸಮ್ಮೇಳನದ ಸ್ಥಳಕ್ಕೆ ಅಂಗವಿಕಲರನ್ನು ಕರೆದೊಯ್ದು ಮತ್ತು ಅವರನ್ನು ವಾಪಸ್ ತಂದು ಬಿಡುತ್ತೇವೆ' ಎನ್ನುತ್ತಾರೆ ಈ ಸಂಘದ ಮುಖಂಡ ಪರಶುರಾಮ ಗುನ್ನಾಪುರ.

`ಈ ಸೇವೆ ಒದಗಿಸಲು ನಾವೆಲ್ಲ ನಮ್ಮ ಸ್ವಂತ ಖರ್ಚಿನಲ್ಲಿ ಟಿ ಶರ್ಟ್ ಖರೀದಿಸಿದ್ದೇವೆ. ನಮ್ಮ ಸ್ಕೂಟರ್ಗಳಿಗೆ ನಾವೇ ಪೆಟ್ರೋಲ್ ತುಂಬಿಸಿಕೊಳ್ಳುತ್ತಿದ್ದೇವೆ. ಈ ಸೇವೆಗಾಗಿ ನಮ್ಮ ದುಡಿಮೆಯ ಹಣ ವಿನಿಯೋಗಿಸುತ್ತಿದ್ದೇವೆ' ಎನ್ನುತ್ತಾರೆ ಸುರೇಶ ಚವ್ಹಾಣ, ಅಶೋಕ ವಾಲೀಕಾರ.

ಟಾಂಗಾ ಸವಾರಿ: ಆಟೊ ಮತ್ತಿತರ ವಾಹನಗಳ ಭರಾಟೆಯ ಮಧ್ಯೆಯೂ ಟಾಂಗಾಗಳನ್ನು (ಕುದುರೆ ಗಾಡಿ) ಉಳಿಸಿಕೊಂಡಿರುವುದು ವಿಜಾಪುರ ಟಾಂಗಾವಾಲಾಗಳ ಹೆಗ್ಗಳಿಕೆ. ಟಾಂಗಾಗಳಲ್ಲಿ ಕುಳಿತು ದಾರಿಯುದ್ದಕ್ಕೂ ಕಾಣಸಿಗುವ ಸ್ಮಾರಕಗಳನ್ನು ನೋಡುತ್ತ ಸಾಗುವುದೇ ಒಂದು ಅಪರೂಪದ ಅನುಭವ ಆಗಲಿದೆ.

`ಸಾಹಿತ್ಯ ಸಮ್ಮೇಳನದ ವಿವಿಧ ಗೋಷ್ಠಿಗಳಿಗೆ ಆಹ್ವಾನಿಸಿರುವ ಸಾಹಿತಿಗಳು, ಗಣ್ಯರನ್ನು ರೈಲ್ವೆ, ಬಸ್ ನಿಲ್ದಾಣಗಳಿಂದ ವೇದಿಕೆ ಹಾಗೂ ವಸತಿ ನಿಲಯಗಳಿಗೆ ಕರೆದೊಯ್ಯಲು ಈ ಟಾಂಗಾಗಳ ವ್ಯವಸ್ಥೆ ಮಾಡಿದ್ದೇವೆ. ಇದೇ 8 ಮತ್ತು 9ರಂದು ಎರಡು ದಿನಗಳ ಕಾಲ ಟಾಂಗಾ ಸವಾರಿ ಸೌಲಭ್ಯ ಲಭ್ಯ. ಬಸ್- ರೈಲು ನಿಲ್ದಾಣ, ಸಮ್ಮೇಳನ ಸ್ಥಳದಲ್ಲಿರುವ ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸಿ ಟಾಂಗಾ ಸವಾರಿ ಮಾಡಬಹುದು' ಎನ್ನುತ್ತಾರೆ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ, ಶಾಸಕ ಅಪ್ಪು ಪಟ್ಟಣಶೆಟ್ಟಿ.

`ನಾವು ಕಡುಬಡವರು. ಸಾಹಿತಿಗಳ ಸೇವೆ ಒದಗಿಸುವ ಅವಕಾಶ ಲಭಿಸಿರುವುದು ನಮ್ಮ ಸುಯೋಗ. ಟಾಂಗಾ ಮತ್ತು ಕುದುರೆಗಳಿಗೆ ವಿಶೇಷ ಅಲಂಕಾರ ಮಾಡಿಕೊಂಡು ಸನ್ನದ್ಧರಾಗಿದ್ದೇವೆ' ಎಂದು ಟಾಂಗಾವಾಲಾ ಮೈನೂಸಾಬ್ ಜಮಖಾನೆ ಸಂತಸ ವ್ಯಕ್ತಪಡಿಸಿದ್ದಾರೆ.

ಅಂಗವಿಕಲರಿಗೆ ವಿಐಪಿ ಪಾಸ್
`ಸಮ್ಮೇಳನಕ್ಕೆ ಬರುವ ಅಂಗವಿಕಲರಿಗಾಗಿ 150 ವಿಐಪಿ ಪಾಸ್ ನೀಡುವುದಾಗಿ ಸ್ವಾಗತ ಸಮಿತಿ ಭರವಸೆ ನೀಡಿದೆ. ಹೀಗಾಗಿ ಅಂಗವಿಕಲರಿಗೆ ವಿಐಪಿ ಆತಿಥ್ಯ ದೊರೆಯಲಿದೆ. ಇದೇ 8ರಂದು ಬೆಳಿಗ್ಗೆ 10ರಿಂದ ಆರಂಭವಾಗುವ ಈ ಸೇವೆ ಸಮ್ಮೇಳನದ ಕೊನೆಯ ದಿನದವರೆಗೂ ಇರಲಿದೆ. ನಮ್ಮ ಸೇವೆಯ ಅಗತ್ಯವಿರುವವರು ಮೊಬೈಲ್ 94817-04007 ಸಂಪರ್ಕಿಸಬೇಕು' ಎಂದು ಪರಶುರಾಮ ಗುನ್ನಾಪುರ ಮನವಿ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.