ಬೆಂಗಳೂರು (ಐಎಎನ್ಎಸ್): ಹಂಪಿಯಲ್ಲಿ ಆರಂಭವಾಗಿದ್ದ ಖ್ಯಾತ ಹಿಂದಿ ಚಿತ್ರನಟ ಅಕ್ಷಯಕುಮಾರ್ ಹಾಗೂ ಸೋನಾಕ್ಷಿ ಸಿನ್ಹಾ ಅಭಿನಯದ `ರೌಡಿ ರಾಠೋಡ್~ ಚಲನಚಿತ್ರದ ಹಾಡುಗಳ ಚಿತ್ರೀಕರಣಕ್ಕೆ ಮಂಗಳವಾರ ಸ್ಥಳೀಯರು ಅಡ್ಡಿಪಡಿಸಿದರು.

ಸ್ಥಳೀಯ ನೃತ್ಯಗಾರರಿಗೆ ಕನಿಷ್ಠ ಪ್ರಾತಿನಿಧ್ಯ ಕೂಡಾ ದೊರೆತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಚಿತ್ರೀಕರಣಕ್ಕೆ ಅಡ್ಡಿಪಡಿಸಿದರು. ಚಿತ್ರೀಕರಣಕ್ಕೆ ಮಂಗಳವಾರದಿಂದ ಶುಕ್ರವಾರದವರೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಸೋಮವಾರವೇ ಆರಂಭಿಸಿದ್ದು ಕೂಡಾ ಚಿತ್ರೀಕರಣ ನಿಲ್ಲಲು ಇನ್ನೊಂದು ಕಾರಣ ಎಂದು ಹೇಳಲಾಗಿದೆ.

ಸೋಮವಾರದಿಂದ ಆರಂಭವಾಗಿದ್ದ ಚಿತ್ರೀಕರಣದಲ್ಲಿ ಖ್ಯಾತ ನಟನಟಿಯರು ಪಾಲ್ಗೊಂಡಿದ್ದರು.
ಐತಿಹಾಸಿಕ ಹಂಪಿಯ ವಿಜಯವಿಠಲ, ಪುರಂದರ ಮಂಟಪ, ಆನೆಸಾಲು ಒಂಟೆ ಸಾಲುಗಳ ಬಳಿ ಮತ್ತು ಕಮಲ್ಮಹಲ್ ಆಸುಪಾಸಿನಲ್ಲಿ ಚಿತ್ರದ ಹಾಡುಗಳಿಗೆ ಅದ್ದೂರಿಯಾಗಿ ಚಿತ್ರೀಕರಣ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.