ಬೆಂಗಳೂರು: ಲಂಡನ್ನ ವೈಲ್ಡ್ಲೈಫ್ ಫೋಟೋಗ್ರಾಫರ್ ಆಫ್ ದ ಇಯರ್ ಡಾಟ್ ಕಾಂ ನಡೆಸುವ ‘ಪೀಪಲ್ಸ್ ಚಾಯ್ಸ್’ ಪ್ರಶಸ್ತಿಯ ಅಂತಿಮ ಸುತ್ತಿಗೆ ಶೃಂಗೇರಿಯ ಎಸ್.ಎಸ್. ರವಿಪ್ರಕಾಶ್ ಅವರ ‘ಪ್ಯೂರ್ ಮ್ಯಾಜಿಕ್’ ಶೀರ್ಷಿಕೆಯ ಛಾಯಾಚಿತ್ರ ಆಯ್ಕೆಯಾಗಿದೆ. ಈ ಪ್ರತಿಷ್ಠಿತ ಪ್ರಶಸ್ತಿಗೆ ಬಿಬಿಸಿ ಮತ್ತು ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಸಹಭಾಗಿತ್ವ ವಹಿಸಿವೆ.
ವಿಶ್ವದ 96 ದೇಶದ ಸುಮಾರು 42 ಸಾವಿರಕ್ಕೂ ಹೆಚ್ಚು ಪ್ರವೇಶಗಳು ಬಂದಿದ್ದು, ರವಿಪ್ರಕಾಶ್ ಅವರು ಅಂತಿಮ ಸುತ್ತಿಗೆ ಆಯ್ಕೆಯಾದ ಏಕೈಕ ಭಾರತೀಯ.
ಅಂತಿಮ ಸುತ್ತಿಗೆ ಆಯ್ಕೆಯಾದ 50 ಛಾಯಾಚಿತ್ರಗಳನ್ನು ಆನ್ಲೈನ್ ಮತದಾನದ ಮೂಲಕ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಸೆಪ್ಟೆಂಬರ್ 5ರವರೆಗೆ ಆನ್ಲೈನ್ ಮತದಾನಕ್ಕೆ ಅವಕಾಶವಿದೆ.
www.nhm.ac.uk/visitus/wpy/community/peopleschoice/2014/33/ puremagic.html