ಇಸ್ಲಾಮಾಬಾದ್ (ಐಎಎನ್ಎಸ್): ವಿಚಾರಣಾಧೀನ ಕೈದಿಯನ್ನು ಹತ್ಯೆ ಮಾಡಿದ 11 ವರ್ಷದ ಬಾಲಕನಿಗೆ ಪಾಕಿಸ್ತಾನದ ಭಯೋತ್ಪಾದಕ ನಿಗ್ರಹ ನ್ಯಾಯಾಲಯ 50 ವರ್ಷ ಜೈಲು ಮತ್ತು ₨2 ಲಕ್ಷ ದಂಡ ವಿಧಿಸಿದೆ.
ಗೋಹಾರ್ ನವಾಜ್ ಶಿಕ್ಷೆಗೊಳಗಾದವ. ಜೂನ್ನಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ ವಾಪಸ್ ಕರೆದೊಯ್ಯುತ್ತಿದ್ದ ಹಫೀಜ್ ಘಯಾಸ್ ಎಂಬ ಕೈದಿಯನ್ನು ಆತ ಗುಂಡಿಕ್ಕಿ ಸಾಯಿಸಿದ್ದ.
ವೈಯಕ್ತಿಕ ದ್ವೇಷದಿಂದಾಗಿ ಘಯಾಸ್, ಗೋಹಾರ್ನ ತಂದೆಯ ಕೊಲೆ ಮಾಡಿದ್ದ. ಮಹಿಳೆಯರ ಕೈಚೀಲದಲ್ಲಿ ಪಿಸ್ತೂಲ್ ಇಟ್ಟುಕೊಂಡಿದ್ದರಿಂದ ನ್ಯಾಯಾಲಯ ಪ್ರವೇಶಿಸುವ ವೇಳೆ ಪೊಲೀಸರು ತಪಾಸಣೆ ಮಾಡಿರಲಿಲ್ಲ.