ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಸಾಂಸ್ಕೃತಿಕ ಮೇಳ: 1.5 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆ

Published 19 ಮೇ 2023, 16:08 IST
Last Updated 19 ಮೇ 2023, 16:08 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಈ ವರ್ಷ ನಡೆಯಲಿರುವ ನಾಲ್ಕನೇ ವಿಶ್ವ ಸಾಂಸ್ಕೃತಿಕ ಮೇಳದಲ್ಲಿ (ವರ್ಲ್ಡ್‌ ಕಲ್ಚರಲ್‌ ಫೆಸ್ಟಿವಲ್‌) ಜಗತ್ತಿನಾದ್ಯಂತ 1.5 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವರು’ ಎಂದು ಕಾರ್ಯಕ್ರಮ ಆಯೋಜನೆ ಮಾಡಿರುವ ಆರ್ಟ್‌ ಆಫ್‌ ಲಿವಿಂಗ್‌ ಫೌಂಡೇಶನ್‌ ತಿಳಿಸಿದೆ.

ಕೊಲಂಬಿಯಾದ ಮೇಯರ್‌ ಮ್ಯುರಿಯಲ್‌ ಬೌಸರ್‌ ಅವರು ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್‌ ಗುರೂಜಿ ಅವರ ಜೊತೆಗೂಡಿ ಕಾರ್ಯಕ್ರಮದ ಸಿದ್ಧತೆಗಳಿಗೆ ಚಾಲನೆ ನೀಡಿದರು. ವಿಶ್ವ ಸಾಂಸ್ಕೃತಿಕ ಮೇಳವನ್ನು ಸಾಂಸ್ಕೃತಿಕ ಒಲಿಂಪಿಕ್ಸ್‌ (ಕಲ್ಚರಲ್‌ ಒಲಿಂಪಿಕ್ಸ್‌) ಎಂದೂ ಕರೆಯಲಾಗುತ್ತದೆ.

‘ಈ ಮೇಳ ಸೆಪ್ಟೆಂಬರ್‌ 29ರಿಂದ ಅಕ್ಟೋಬರ್‌ 1ರವರೆಗೆ ಒಟ್ಟು ಮೂರು ದಿನಗಳ ಕಾಲ ನಡೆಯಲಿದೆ’ ಎಂದು ಆಯೋಜಕರು ತಿಳಿಸಿದರು.

ಶ್ರೀ ಶ್ರೀ ರವಿಶಂಕರ್‌
ಶ್ರೀ ಶ್ರೀ ರವಿಶಂಕರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT