ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಜ್‌ ಯಾತ್ರೆಗೆ 20 ಲಕ್ಷ ಮಂದಿ

Last Updated 9 ಆಗಸ್ಟ್ 2019, 18:19 IST
ಅಕ್ಷರ ಗಾತ್ರ

ಮೆಕ್ಕಾ: ಸೌದಿ ಅರೇಬಿಯದ ಮೆಕ್ಕಾ ನಗರದಲ್ಲಿ ವಾರ್ಷಿಕ ಹಜ್‌ ಯಾತ್ರೆಗಾಗಿ 20 ಲಕ್ಷಕ್ಕೂ ಅಧಿಕ ಮಂದಿ ಸೇರಿದ್ದಾರೆ. ಸೌದಿಯ ಮಾಧ್ಯಮಗಳ ಪ್ರಕಾರ, ಈ ವರ್ಷ ಒಟ್ಟಾರೆ 25 ಲಕ್ಷ ಜನ ಸೇರುವ ನಿರೀಕ್ಷೆಯಿದೆ. ವಾರ್ಷಿಕ ಹಜ್‌ ಯಾತ್ರೆ ಶುಕ್ರವಾರ ಆರಂಭವಾಯಿತು.

ಮುಸ್ಲಿಮರು ಅತ್ಯಧಿಕ ಸಂಖ್ಯೆಯಲ್ಲಿ ಒಟ್ಟುಗೂಡುವ ವಾರ್ಷಿಕ ಧಾರ್ಮಿಕ ಯಾತ್ರೆ ಇದಾಗಿದೆ. ವಿವಿಧೆಡೆಯಿಂದ ಆಗಮಿಸಿರುವ ಮುಸ್ಲಿಮರು ಸಾಂಪ್ರದಾಯಿಕ ಉಡುಪಿನಲ್ಲಿ ಮೆಕ್ಕಾದಲ್ಲಿ ಇರುವ ಪವಿತ್ರ ತಾಣ, ಚೌಕಾಕೃತಿಯ ‘ಕಾಬಾ’ ಸುತ್ತಲೂ ಸೇರಲಿದ್ದಾರೆ.

ಹಜ್‌ ಯಾತ್ರೆಗೆ 2017ರಲ್ಲಿ 23.7 ಲಕ್ಷ ಮತ್ತು 2016ರಲ್ಲಿ 18.6 ಲಕ್ಷ ಜನ ಸೇರಿದ್ದರು. ಈ ಬಾರಿ ಸುಮಾರು 3,000 ಅಂತರರಾಷ್ಟ್ರೀಯ ವಿಮಾನಗಳು, 25,000 ಬಸ್‌ಗಳ ಮೂಲಕ ಯಾತ್ರಿಗಳು ಮೆಕ್ಕಾ ತಲುಪಲಿದ್ದಾರೆ.

ಯಾತ್ರಿಗಳ ಸಂಪರ್ಕಕ್ಕಾಗಿ 13,000 ದೂರಸಂಪರ್ಕ ಟವರ್‌ಗಳು, 5,400 ವೈ–ಫೈ ವಲಯಗಳನ್ನು ಸ್ಥಾಪಿಸಲಾಗಿದೆ. ಸ್ವಚ್ಛತಾ ಕಾರ್ಯಗಳಿಗೆ 4,000 ಸಿಬ್ಬಂದಿ ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT