ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ನೌಕಾ ಪಡೆ ವಿಮಾನ ಪತನ: ಮೂವರ ಸಾವು

Published 27 ಆಗಸ್ಟ್ 2023, 15:39 IST
Last Updated 27 ಆಗಸ್ಟ್ 2023, 15:39 IST
ಅಕ್ಷರ ಗಾತ್ರ

ಕ್ಯಾನ್‌ಬೆರಾ (ಎಪಿ): ಅಮೆರಿಕದ ನೌಕಾ ಪಡೆಯ ವಿಮಾನವು (ಮರೀನ್‌ ಕೋಪ್ಸ್‌) ಉತ್ತರ ಆಸ್ಟ್ರೇಲಿಯಾದ ದ್ವೀಪದಲ್ಲಿ ಬಹು ರಾಷ್ಟ್ರಗಳ ನೌಕಾಪಡೆಗಳ ತರಬೇತಿ ಕಸರತ್ತಿನ ವೇಳೆ ಭಾನುವಾರ ಪತನಗೊಂಡಿದ್ದು, ಮೂವರು ಮೃತಪಟ್ಟಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಲ್ ಬೋಯಿಂಗ್ ವಿ-22 ಓಸ್ಪ್ರೇ ಟಿಲ್ಟ್ರೋಟರ್ ವಿಮಾನವು ಸ್ಥಳೀಯ ಕಾಲಮಾನ ಬೆಳಿಗ್ಗೆ 9.30ರ ಸುಮಾರಿಗೆ ಅಪಘಾತಕ್ಕೀಡಾಗಿ ಮೆಲ್ವಿಲ್ಲೆ ದ್ವೀಪದಲ್ಲಿ ಪತನಗೊಂಡಿದೆ. ವಿಮಾನದಲ್ಲಿದ್ದ 23 ಮಂದಿಗಳ ಪೈಕಿ ಮೂವರು ಸಾವನ್ನಪ್ಪಿದ್ದಾರೆ. ಐವರ ಸ್ಥಿತಿ ಗಂಭೀರವಾಗಿದೆ ಎಂದು ನೌಕಾಪಡೆಯ ಹೇಳಿಕೆ ತಿಳಿಸಿದೆ.

ಅಮೆರಿಕ, ಆಸ್ಟ್ರೇಲಿಯಾ, ಇಂಡೋನೇಷ್ಯಾ, ಫಿಲಿಪ್ಪೀನ್ಸ್‌ ಮತ್ತು ಪೂರ್ವ ತಿಮೋರ್‌ನ ನೌಕಾಪಡೆಗಳ ವಿಮಾನಗಳು ಜಂಟಿ ತಾಲೀಮು ನಡೆಸುತ್ತಿದ್ದು, ವಿಮಾನ ಅಪಘಾತದಲ್ಲಿ ಅಮೆರಿಕದ ರಕ್ಷಣಾ ಪಡೆಯ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT