ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

800 ಅಡಿ ಪ್ರಪಾತಕ್ಕೆ ಬಿದ್ದು ಕೇರಳದ ದಂಪತಿ ಸಾವು

ಕ್ಯಾಲಿಫೋರ್ನಿಯಾದ ಯೊಸೆಮೈಟ್ ನ್ಯಾಷನಲ್ ಪಾರ್ಕ್ ವೀಕ್ಷಣೆ ವೇಳೆ ದುರಂತ
Last Updated 30 ಅಕ್ಟೋಬರ್ 2018, 18:44 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಅಮೆರಿಕದ ಕ್ಯಾಲಿಫೋರ್ನಿಯಾದ ಯೊಸೆಮೈಟ್ ನ್ಯಾಷನಲ್ ಪಾರ್ಕ್ ವೀಕ್ಷಣೆಗೆ ಹೋಗಿದ್ದ ಭಾರತ ಮೂಲದ ದಂಪತಿ ಬೆಟ್ಟದ ತುದಿಯಿಂದ 800 ಅಡಿ ಪ್ರಪಾತಕ್ಕೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ.

ವಿಷ್ಣು ವಿಶ್ವನಾಥ್(29) ಮತ್ತು ಮೀನಾಕ್ಷಿ ಮೂರ್ತಿ(30) ಮೃತಪಟ್ಟವರು. ಇವರ ದೇಹವನ್ನು ಇದೇ 25ರಂದು ಮೇಲಕ್ಕೆ ಎತ್ತಲಾಗಿದ್ದು, ದಂಪತಿ ಭಾರತದ ಮೂಲದವರು ಎಂದು ಸೋಮವಾರ ತಿಳಿದು ಬಂದಿದೆ.

ಯೊಸೆಮೈಟ್ ನ್ಯಾಷನಲ್ ಪಾರ್ಕ್ ಯೊಸೆಮೈಟ್ ವ್ಯಾಲಿ, ಯೊಸೆಮೈಟ್ ಫಾಲ್ಸ್ ಮತ್ತು ಎಲ್ ಕ್ಯಾಪಿಟನ್ ವೀಕ್ಷಣೆಗೆ ಈ ಜೋಡಿ ತೆರಳಿದ್ದು, ಬೆಟ್ಟದ ತುದಿಯಲ್ಲಿ ನಿಂತು ಫೋಟೊ ಕ್ಲಿಕ್ಕಿಸುವಾಗ ಆಕಸ್ಮಿಕವಾಗಿ ಜಾರಿ ಪ್ರಪಾತಕ್ಕೆ ಬಿದ್ದಿದ್ದಾರೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

‘ದಂಪತಿ ಪ್ರಪಾತಕ್ಕೆ ಬಿದ್ದಿರುವ ಬಗ್ಗೆ ಕಾರಣ ತಿಳಿದು ಬಂದಿಲ್ಲ. ಘಟನೆ ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ’ ಎಂದು ಉದ್ಯಾನದವಕ್ತಾರ ಜೇಮ್ ರಿಚರ್ಡ್ ತಿಳಿಸಿದ್ದಾರೆ.

ಇಬ್ಬರೂ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿದ್ದು, 2014ರಲ್ಲಿ ಮದುವೆಯಾಗಿದ್ದರು ಎನ್ನಲಾಗಿದೆ. ಹಲವು ವರ್ಷಗಳಿಂದ ನ್ಯೂಯಾರ್ಕ್‌ನಲ್ಲಿ ನೆಲೆಸಿದ್ದರು. ವಿಶ್ವನಾಥ್‌ಗೆ ಸಿಸ್ಕೊ ಕಂಪನಿಯಲ್ಲಿ ಕೆಲಸ ಸಿಕ್ಕಿದ ಬಳಿಕ ಕ್ಯಾಲಿಫೋರ್ನಿಯಾಕ್ಕೆ ತೆರಳಿದ್ದರು ಎನ್ನಲಾಗಿದೆ. ‘ಪ್ರಪಂಚ ಸುತ್ತುವ ಕನಸನ್ನು ಹೊಂದಿದ್ದೆವು’ ಎಂಬುದನ್ನು ಈ ದಂಪತಿಯೇ ‘ಹಾಲಿಡೆ ಅಂಡ್ ಹ್ಯಾಪಿಲಿಎವರ್‌ಆಫ್ಟರ್‌’ ಎಂಬ ‌ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

ಕೇರಳದ ಚೆಂಗನ್ನೂರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾಗಿಯೂ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT