ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಷಿಂಗ್ಟನ್‌: ಕೇಜ್ರಿವಾಲ್ ಬೆಂಬಲಿಸಿ ವಿಶ್ವದಾದ್ಯಂತ ಪ್ರತಿಭಟನೆ

Published 10 ಏಪ್ರಿಲ್ 2024, 12:50 IST
Last Updated 10 ಏಪ್ರಿಲ್ 2024, 12:50 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಡಿ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಬೆಂಬಲಿಸಿ ವಿಶ್ವದಾದ್ಯಂತ ಇರುವ ಎಎಪಿ ಸದಸ್ಯರು ಮತ್ತು ಬೆಂಬಲಿಗರು ಪ್ರತಿಭಟನೆ ಮತ್ತು ಉಪವಾಸ ಸತ್ಯಾ‌ಗ್ರಹ ಮಾಡಿದರು.

ಅಮೆರಿಕ, ಕೆನಡಾ, ಬ್ರಿಟನ್‌, ಐರ್ಲೆಂಡ್‌ ಮತ್ತು ಆಸ್ಟ್ರೇಲಿಯಾದಲ್ಲಿರುವ ಎಎಪಿ ಕಾರ್ಯಕರ್ತರು ಭಾರತೀಯ ರಾಯಭಾರ ಕಚೇರಿ ಎದುರು ಮತ್ತು ಪ್ರಮುಖ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿ, ಕೇಜ್ರಿವಾಲ್ ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.

‘ಸಮಾನತೆಯ ಸಮಾಜಕ್ಕಾಗಿ ಹೋರಾಟ ಮಾಡುತ್ತಿರುವ ಲಕ್ಷಾಂತರ ಭಾರತೀಯರ ಭರವಸೆಯ ಪ್ರತೀಕ ಅರವಿಂದ್‌ ಕೇಜ್ರಿವಾಲ್. ಅವರ ಬಂಧನವು ‍ಪ್ರಜಾಪ್ರಭುತ್ವದ ಮೇಲಿನ ದಾಳಿಗೆ ಉದಾಹರಣೆ’ ಎಂದು ಲಾಸ್ಏಂಜಲೀಸ್‌ನಲ್ಲಿರುವ ಎಎಪಿ ಸದಸ್ಯ ಜಸ್ವಂತ್‌ ರೆಡ್ಡಿ ಆರೋಪಿಸಿದರು.

ನ್ಯೂಯಾರ್ಕ್, ಬಾಸ್ಟನ್‌, ಸ್ಯಾನ್‌ಫ್ರಾನ್ಸಿಸ್ಕೊ, ಡಲ್ಲಾಸ್‌, ಲಾಸ್ಏಂಜಲೀಸ್‌, ಟೊರಾಂಟೊ, ವ್ಯಾಂಕೋವರ್‌, ಲಂಡನ್‌, ಬರ್ಲಿನ್‌, ಓಸ್ಲೊ ಮತ್ತು ಮೆಲ್ಬರ್ನ್‌ ಮೊದಲಾದ ಕಡೆ ಎಎಪಿ ಕಾರ್ಯಕರ್ತರು ಉಪವಾಸ ಸತ್ಯಾಗ್ರಹ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT