ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರಕು ಸಾಗಣೆ ಹಡಗು ಗುರಿಯಾಗಿಸಿ ಡ್ರೋನ್‌ ದಾಳಿ: ಹೂಥಿ ಕೃತ್ಯ ಶಂಕೆ

Published 23 ಜೂನ್ 2024, 16:21 IST
Last Updated 23 ಜೂನ್ 2024, 16:21 IST
ಅಕ್ಷರ ಗಾತ್ರ

ದುಬೈ: ಯೆಮೆನ್‌ನ ಹೂಥಿ ಬಂಡುಕೋರರು ಉಡಾವಣೆ ಮಾಡಿದ್ದರು ಎನ್ನಲಾದ ಡ್ರೊನ್‌, ಕೆಂಪುಸಮುದ್ರದಲ್ಲಿ ಹಡಗೊಂದಕ್ಕೆ ಡಿಕ್ಕಿ ಹೊಡೆದಿದ್ದು, ಜಖಂಗೊಳಿಸಿದೆ. ಹಡಗುಗಳನ್ನು ಗುರಿಯಾಗಿಸಿ ನಡೆದ ಡ್ರೋನ್‌ ದಾಳಿಯ ಮತ್ತೊಂದು ಪ್ರಕರಣ ಇದಾಗಿದೆ.

ಅಮೆರಿಕವು ಇಲ್ಲಿ ನಿಯೋಜಿಸಿದ್ದ ಯುಎಸ್‌‌ಎಸ್‌ ಡ್ವೈಟ್‌ ಡಿ ಐಸೆನ್‌ಹೊವೆರ್ ತುಕಡಿಯನ್ನು ಸ್ವದೇಶಕ್ಕೆ ಕಳುಹಿಸಿದ್ದ ಹಿಂದೆಯೇ ಈ ದಾಳಿ ಪ್ರಕರಣ ವರದಿಯಾಗಿದೆ.

ಚೀನಾದ ಕ್ವಿಂಗ್ಡಾವೊಗೆ ತೆರಳುತ್ತಿದ್ದ ಹಡಗು ಗುರಿಯಾಗಿಸಿ ದಾಳಿ ನಡೆದಿದೆ. ಸದ್ಯ ಹೂಥಿ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ತಡವಾಗಿ ಹೊಣೆ ಹೊರಬಹುದು ಎನ್ನಲಾಗಿದೆ.

ನಿರ್ದಿಷ್ಟ ಸರಕು ಸಾಗಣೆ ಹಡಗುಗಳನ್ನು ಗುರಿಯಾಗಿಸಿ ಹೂಥಿ ಬಂಡುಕೋರರು ಇದುವರೆಗೂ 60ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದ್ದಾರೆ.

ಏಷ್ಯಾ, ಮಧ್ಯಪ್ರಾಚ್ಯ ಮತ್ತು ಐರೋಪ್ಯ ಮಾರುಕಟ್ಟೆಗಳಿಗೆ ಸಂಪರ್ಕ ಕಲ್ಪಿಸುವ ಈ ನಿರ್ಣಾಯಕ ಮಾರ್ಗದಲ್ಲಿ, ಡ್ರೋನ್‌ ದಾಳಿ ಪ್ರಕರಣಗಳ ಬಳಿಕ ಹಡಗುಗಳ ಸಂಚಾರ ಕಡಿಮೆ ಆಗಿದೆ. ಇಸ್ರೇಲ್–ಹಮಾಸ್‌ ನಡುವಿನ ಸಂಘರ್ಷ ನಿಲ್ಲುವವರೆಗೂ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುವುದು ಎಂದು ಹೂಥಿ ಬಂಡುಕೋರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT