ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಕ್ಯಾಲಿಫೋರ್ನಿಯಾದ ದೇವಾಲಯದ ಮೇಲೆ ಖಾಲಿಸ್ತಾನ ಪರ ಬರಹ

Published 5 ಜನವರಿ 2024, 7:20 IST
Last Updated 5 ಜನವರಿ 2024, 7:20 IST
ಅಕ್ಷರ ಗಾತ್ರ

ಸ್ಯಾನ್ ಫ್ರಾನ್ಸಿಸ್ಕೊ: ಅಮೆರಿಕದ ಕ್ಯಾಲಿಫೋರ್ನಿಯಾದ ಹಿಂದೂ ದೇವಾಲಯದ ಮೇಲೆ ಖಾಲಿಸ್ತಾನ ಪರ ಹೋರಾಟಗಾರರು ದಾಳಿ ಮಾಡಿದ್ದು, ಖಾಲಿಸ್ತಾನ ಪರ ಘೋಷಣೆಗಳನ್ನು ಬರೆದು ವಿರೂಪಗೊಳಿಸಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೊದ ಬೌ ಪ್ರದೇಶದ ಹೇವಾರ್ಡ್‌ನಲ್ಲಿರುವ ಶೆರಾವಲಿ ದೇವಸ್ಥಾನದಲ್ಲಿ ಅಪರಿಚಿತ ವ್ಯಕ್ತಿಗಳು ಕೃತ್ಯ ಎಸಗಿದ್ದಾರೆ ಎಂದು ಹಿಂದೂ ಅಮೆರಿಕನ್ ಫೌಂಡೇಶನ್ (ಎಚ್‌ಎಎಫ್) ಶುಕ್ರವಾರ ತಿಳಿಸಿದೆ.

ನೆವಾರ್ಕ್‌ನಲ್ಲಿರುವ ಶ್ರೀ ಸ್ವಾಮಿನಾರಾಯಣ ಮಂದಿರದಲ್ಲೂ ಖಾಲಿಸ್ತಾನಿ ಹೋರಾಟಗಾರರು ಕೃತ್ಯ ಎಸಗಿದ್ದರು.

ಖಾಲಿಸ್ತಾನ ಪರ ಘೋಷಣೆಗಳನ್ನು ಗೀಚುವ ಮೂಲಕ ಮತ್ತೊಂದು ಹಿಂದೂ ದೇವಾಲಯದ ಮೇಲೆ ಖಾಲಿಸ್ತಾನ ಪರ ಹೋರಾಟಗಾರರು ದಾಳಿ ನಡೆಸಿದ್ದಾರೆ. ಸ್ವಾಮಿನಾರಾಯಣ ಮಂದಿರದ ಮೇಲೆ ದಾಳಿ ನಡೆದು ಎರಡು ವಾರ ಕಳೆದಿದ್ದು, ವಾರದ ಹಿಂದೆ ಅದೇ ಪ್ರದೇಶದ ಶಿವದುರ್ಗಾ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಇದೀಗ, ಶೆರಾವಲಿ ದೇವಾಲಯವನ್ನೂ ವಿರೂಪಗೊಳಿಸಿದೆ’ ಎಂದು ಎಚ್‌ಎಎಫ್‌ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

ಪ್ರಕರಣ ಸಂಬಂಧ ಆಲಮೇಡ ಪೊಲೀಸ್ ಇಲಾಖೆ ಮತ್ತು ನಾಗರಿಕ ಹಕ್ಕುಗಳ ವಿಭಾಗವನ್ನು ಸಂಪರ್ಕಿಸಿರುವುದಾಗಿ ಪ್ರತಿಷ್ಠಾನ ತಿಳಿಸಿದೆ.

ಎಚ್‌ಎಎಫ್ ದೇವಾಲಯದ ಮುಖಂಡರು,ಆಲಮೇಡ ಪೊಲೀಸ್ ಇಲಾಖೆ ಮತ್ತು ನಾಗರಿಕ ಹಕ್ಕುಗಳ ವಿಭಾಗದ ಸಂಪರ್ಕದಲ್ಲಿರುವುದಾಗಿ ಪೋಸ್ಟ್‌ನಲ್ಲಿ ಪ್ರತಿಷ್ಠಾನ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT