ಅಬುಜಾ (ನೈಜೀರಿಯಾ): ಇಲ್ಲಿನ ನಿಗರ್ ಪ್ರಾಂತ್ಯದಲ್ಲಿ ಸಂಭವಿಸಿದ ಭಾರಿ ಪ್ರವಾಹಕ್ಕೆ ಮಾರುಕಟ್ಟೆ ಪಟ್ಟಣ ಮೊಕ್ವಾ ಮುಳುಗಡೆಯಾಗಿ 117 ಮಂದಿ ಮೃತಪಟ್ಟಿದ್ದಾರೆ.

ಮೊಕ್ವಾ ಪಟ್ಟಣವು ದೇಶದ ದಕ್ಷಿಣ ಹಾಗೂ ಉತ್ತರ ಭಾಗದ ನಡುವಿನ ವ್ಯಾಪಾರದ ಕೊಂಡಿಯಾಗಿದೆ.

‘ಈ ಹಿಂದೆ 20 ಮಂದಿ ಮೃತಪಟ್ಟಿದ್ದಾರೆ ಎಂದು ಭಾವಿಸಲಾಗಿತ್ತು. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಇದುವರೆಗೂ 117 ಮಂದಿಯ ಮೃತದೇಹಗಳು ಸಿಕ್ಕಿವೆ. ಇನ್ನಷ್ಟು ಹೆಚ್ಚು ಮಂದಿ ಅಪಾಯಕ್ಕೆ ಸಿಲುಕಿರುವ ಸಾಧ್ಯತೆಯಿದೆ’ ಎಂದು ರಕ್ಷಣಾ ಕಾರ್ಯಾಚರಣಾ ವಿಭಾಗದ ಮುಖ್ಯಸ್ಥ ಹುಸೇನಿ ಇಶಾ ತಿಳಿಸಿದ್ದಾರೆ.

‘ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಕಾರ್ಯಾಚರಣೆಯನ್ನು ಬಿರುಸುಗೊಳಿಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.