ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾ ಸೈಬರ್ ವಂಚನೆ: ಚೀನಾ ವ್ಯಕ್ತಿಯ ಬಂಧನ

2014ರಿಂದ 200 ದೇಶಗಳಲ್ಲಿ ವಂಚನೆ, ₹824 ಕೋಟಿ ಲಾಭ–ಆರೋಪ
Published 30 ಮೇ 2024, 16:15 IST
Last Updated 30 ಮೇ 2024, 16:15 IST
ಅಕ್ಷರ ಗಾತ್ರ

ವಾಷಿಂಗ್ಟನ್: ಒಂದು ದಶಕಕ್ಕೂ ಹೆಚ್ಚು ಕಾಲ ‘ಬಾಟ್‌ನೆಟ್‌’ ಮೂಲಕ ಅಕ್ರಮವಾಗಿ ಅಪರಾಧಿಗಳಿಗೆ ಮಾಹಿತಿ ದೊರೆಯುವಂತೆ ಮಾಡಿ, ಸುಮಾರು 9.9 ಕೋಟಿ ಅಮೆರಿಕನ್ ಡಾಲರ್‌ನಷ್ಟು (₹824 ಕೋಟಿ) ಲಾಭ ಮಾಡಿದ ಆರೋಪದ ಮೇಲೆ ಚೀನಾದ ವ್ಯಕ್ತಿಯೊಬ್ಬನನ್ನು ಅಂತರರಾಷ್ಟ್ರೀಯ ಕಾನೂನು ಜಾರಿ ತಂಡವೊಂದು ಬಂಧಿಸಿದೆ. 

‘ಆರೋಪಿಯು ‘911 ಎಸ್‌5’ ಎಂಬ ‘ಬಾಟ್‌ನೆಟ್‌’ (ಮಾಲ್‌ವೇರ್‌ಗಳ ನೆಟ್‌ವರ್ಕ್) ಮೂಲಕ 200 ದೇಶಗಳ ಅಸಂಖ್ಯ ಕಂಪ್ಯೂಟರ್‌ಗಳ ಮಾಹಿತಿಯನ್ನು 2014ರಿಂದ ಕಳವು ಮಾಡಿದ್ದ’ ಎಂದು ಅಮೆರಿಕದ ನ್ಯಾಯಿಕ ವಿಭಾಗವು, ‘ಫೆಡರಲ್ ಬ್ಯೂರೊ ಆಫ್ ಇನ್‌ವೆಸ್ಟಿಗೇಷನ್’ (ಎಫ್‌ಬಿಐ)  ನಿರ್ದೇಶಕ ಕ್ರಿಸ್ಟೋಫರ್‌ ರೇ ಅವರ ಹೇಳಿಕೆಯನ್ನು ಆಧರಿಸಿ ತಿಳಿಸಿದೆ. 

ಬಂಧಿತನನ್ನು ಯುನ್ಹೆ ವಾಂಗ್ (35) ಎಂದು ಗುರುತಿಸಲಾಗಿದೆ. ಮೇ 24ರಂದು ಸಿಂಗಪೂರ್‌ನಲ್ಲಿ ಈತನನ್ನು ಬಂಧಿಸಲಾಯಿತು ಎಂದು ಎಫ್‌ಬಿಐನ ಉಪ ಸಹಾಯಕ ನಿರ್ದೇಶಕ ಬ್ರೆಟ್‌ ಲೆದರ್‌ಮನ್‌ ಲಿಂಕ್ಡ್‌ ಇನ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. 

ಕಳವು, ಮಕ್ಕಳ ಶೋಷಣೆ, ಹಣಕಾಸು ಅವ್ಯವಹಾರ, ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಪರಿಹಾರ ಮೊತ್ತ ವಿಲೇವಾರಿಗೆ ಸಂಬಂಧಿಸಿದ ಹಗರಣಗಳಲ್ಲಿ ಭಾಗಿಯಾದವರಿಗೆ ಆರೋಪಿಯು ‘ಮಾಲ್‌ವೇರ್‌’ ಮೂಲಕ ಮಾಹಿತಿಯನ್ನು ಒದಗಿಸಿದ್ದಾನೆ ಎಂದೂ ಹೇಳಿದ್ದಾರೆ. 

ಅಕ್ರಮ ವ್ಯವಹಾರಗಳ ನಿರ್ವಹಣೆಗೆಂದೇ 150 ಸರ್ವರ್‌ಗಳನ್ನು ಆರೋಪಿಯು ನಿರ್ವಹಿಸುತ್ತಿದ್ದ ಎಂದೂ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT