ಢಾಕಾ: ಬಾಂಗ್ಲಾದೇಶದ ಜೈಲಿನಲ್ಲಿರುವ ನಾಲ್ವರು ಪತ್ರಕರ್ತರನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಅಂತರರಾಷ್ಟ್ರೀಯ ಪತ್ರಿಕಾ ಕಾವಲು ಪಡೆಯು ಆಗ್ರಹಿಸಿದೆ.

ರಾಜಕೀಯ ಪ್ರೇರಿತ ಕೊಲೆ ಆರೋಪದಡಿ ಪತ್ರಕರ್ತರು ಜೈಲಿನಲ್ಲಿ ಸೆರೆಯಾಗಿದ್ದು, ಇವರನ್ನು ಬಿಡುಗಡೆ ಮಾಡುವಂತೆ ಬಾಂಗ್ಲಾ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನುಸ್ ಅವರನ್ನು ಒತ್ತಾಯಿಸಿದೆ.

‘ಬಾಂಗ್ಲಾವು ಕೊಲೆ ಆರೋಪದಡಿ ಫರ್ಜಾನಾ, ಶಕೀಲ್ ಅಹ್ಮದ್, ಮೊಜಮ್ಮೆಲ್ ಬಾಬು ಮತ್ತು ಶ್ಯಾಮಲ್ ದತ್ತಾ ಅವರನ್ನು ಜೈಲಿನಲ್ಲಿಟ್ಟಿದ್ದು, ಈ ಕ್ರಮವು ರಾಜಕೀಯ ಪ್ರತೀಕಾರದಂತೆ ಕಂಡುಬರುತ್ತಿದೆ’ ಎಂದು ಪತ್ರಕರ್ತರ ರಕ್ಷಣಾ ಸಮಿತಿಯು (ಸಿಪಿಜೆ) ಯೂನುಸ್ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

‘ಹೆಚ್ಚಿನ ಭದ್ರತೆಯಿರುವ ಕಾಶಿಂಪುರ ಜೈಲಿನಲ್ಲಿ ಈ ನಾಲ್ವರು ಬಂಧನದಲ್ಲಿದ್ದು, ಅಲ್ಲಿ ಸೂಕ್ತ ವೈದ್ಯಕೀಯ ಆರೈಕೆ ಇಲ್ಲ’ ಎಂದಿದೆ.

‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್’ ಸಂಸ್ಥೆಯು ಸಹ ಪತ್ರಕರ್ತರ ಬಿಡುಗಡೆಗೆ ಆಗ್ರಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.