ಜೆರುಸಲೇಮ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರನ್ನು ಭಾನುವಾರ ಪದಚ್ಯುತಗೊಳಿಸಲಾಗಿದ್ದು, ನಫ್ತಾಲಿ ಬೆನೆಟ್ ಅವರು ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.

ನೇತನ್ಯಾಹು ಬೆಂಬಲಿಗರ ಗದ್ದಲದ ನಡುವಯೇ, ಅವರ ಪದಚ್ಯುತಿಗೆ 120 ಸದಸ್ಯ ಬಲದ ಇಸ್ರೇಲ್ ಸಂಸತ್ ಅನುಮೋದನೆ ನೀಡಿತು. ಇದರೊಂದಿಗೆ ಕಳೆದ 12 ವರ್ಷಗಳಿಂದಲೂ ಪ್ರಧಾನಿಯಾಗಿದ್ದ ನೇತನ್ಯಾಹು ಅವರ ಅಧಿಕಾರ ಕೊನೆಗೊಂಡಂತಾಗಿದೆ.

ಮಾಜಿ ರಕ್ಷಣಾ ಸಚಿವರೂ ಆಗಿರುವ 49 ವರ್ಷದ ನಫ್ತಾಲಿ ಅವರು ಬಲಪಂಥೀಯ ಪಕ್ಷ ಯಾಮಿನಿ ಪಾರ್ಟಿಯ ಮುಖಂಡ. ಅವರು ಸೈದ್ಧಾಂತಿಕವಾಗಿ ವಿಭಿನ್ನ ನಿಲುವುಗಳನ್ನು ಹೊಂದಿರುವ ಎಡಪಂಥೀಯ, ಬಲಪಂಥೀಯ, ಅರಬ್ ಪಕ್ಷಗಳ ಮೈತ್ರಿಕೂಟದ ನಾಯಕರಾಗಿದ್ದಾರೆ.

ನೂತನ ಸರ್ಕಾರದಲ್ಲಿ 9 ಜನ ಮಹಿಳೆಯರು ಸೇರಿ 27 ಜನ ಸಚಿವರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.