ಹತ್ಯೆ ಪ್ರಕರಣದ ವಿಚಾರಣೆ ನಡೆಸಿದ ಮುಲ್ತಾನ್ ಸೆಷೆನ್ಸ್ ಕೋರ್ಟ್ನ ನ್ಯಾಯಾಧೀಶ ಇಮ್ರಾನ್ ಶಫಿ, ಶುಕ್ರವಾರ ಬಲೋಚ್ನ ಪೋಷಕರ ಸಮ್ಮುಖದಲ್ಲೇ ಮೊಹಮ್ಮದ್ ವಾಸೀಮ್ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದರು. ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಬಲೋಚ್ನ ಮತ್ತೊಬ್ಬ ಸಹೋದರ ಅಸ್ಲಂ ಶಾಹೀನ್, ಸಂಬಂಧಿಕರಾದ ಹಕ್ ನವಾಜ್, ಧಾರ್ಮಿಕ ಗುರು ಅಬ್ದುಲ್ ಖಾವಿಯನ್ನು ಖುಲಾಸೆಗೊಳಿಸಲಾಯಿತು. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಒಟ್ಟು 35 ಸಾಕ್ಷಿಗಳ ಹೇಳಿಕೆಗಳನ್ನು ಕೋರ್ಟ್ ದಾಖಲಿಸಿಕೊಂಡಿದೆ.