ತೈವಾನ್ ತನ್ನದೆಂದು ಭಾವಿಸಿರುವ ಚೀನಾ, ತೈವಾನ್ ಮೇಲೆ ಒತ್ತಡ ಹೇರಲು ಕಳೆದ ಮೂರು ವರ್ಷಗಳಿಂದಲೂ ದ್ವೀಪರಾಷ್ಟ್ರದ ಸುತ್ತಮತ್ತ ತಾಲೀಮು ನಡೆಸುತ್ತಿದೆ. ಚೀನಾ, ಮಂಗಳವಾರದಿಂದ ಹಲವು ಯುದ್ಧವಿಮಾನಗಳು, ಬಾಂಬರ್‌ಗಳು, ಡ್ರೋನ್‌ಗಳು ಸೇರಿದಂತೆ ಮತ್ತಿತರ ಯುದ್ಧ ವಿಮಾನಗಳು ಮತ್ತು ಯುದ್ಧ ನೌಕೆಗಳನ್ನು ದಕ್ಷಿಣ ತೈವಾನ್‌ನತ್ತ ಕಳುಹಿಸುತ್ತಿದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ತಿಳಿಸಿದೆ.