ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ಡೆಲ್ಟಾದ ಉಪತಳಿ ‘ಎವೈ.4’ ಪ್ರಕರಣಗಳು ವರದಿ

ಮೂಲ ವೈರಸ್‌ಗಿಂತಲೂ ಹೆಚ್ಚು ವೇಗದಲ್ಲಿ ಪ್ರಸರಣ, ಅಧಿಕ ಸೋಂಕುಕಾರಕ
Last Updated 13 ಡಿಸೆಂಬರ್ 2021, 10:46 IST
ಅಕ್ಷರ ಗಾತ್ರ

ಬೀಜಿಂಗ್: ಚೀನಾದ ಜೆಜಿಯಾಂಗ್ ಪ್ರಾಂತ್ಯದಲ್ಲಿ ಕೋವಿಡ್‌–19 ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ. ಕೊರೊನಾ ವೈರಸ್‌ ರೂಪಾಂತರಿ ಡೆಲ್ಟಾದ ನೂತನ ಉಪತಳಿ ‘ಎವೈ.4’ ಈ ಸೋಂಕಿಗೆ ಕಾರಣ ಎಂದು ಪ್ರಾಂತ್ಯದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾದಲ್ಲಿ ಈ ಹೊಸ ತಳಿಯ ಸೋಂಕಿನ ಪ್ರಕರಣಗಳು ಇದೇ ಮೊದಲ ಬಾರಿಗೆ ವರದಿಯಾಗಿವೆ. ಈ ಉಪತಳಿ ಸೋಂಕಿನ 138 ಪ್ರಕರಣಗಳು ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ, ಜಿಜಿಯಾಂಗ್‌ ಪ್ರಾಂತ್ಯದ ಜನರು ಪ್ರಯಾಣ ಕೈಗೊಳ್ಳುವುದನ್ನು ಸರ್ಕಾರ ನಿಷೇಧಿಸಿದೆ ಎಂದು ಸರ್ಕಾರಿ ಒಡೆತನದ ಸುದ್ದಿವಾಹಿನಿ ಸಿಜಿಟಿಎನ್‌–ಟಿವಿ ವರದಿ ಮಾಡಿದೆ.

‘ಪ್ರಾಂತ್ಯದ ರಾಜಧಾನಿ ಹ್ಯಾಂಗ್‌ಜೌನಲ್ಲಿ 17 ಪ್ರಕರಣಗಳು, ನಿಂಗ್‌ಬೊ ಹಾಗೂ ಶಾವೊಜಿಂಗ್ ನಗರಗಳಲ್ಲಿ ಕ್ರಮವಾಗಿ 44 ಹಾಗೂ 77 ಪ್ರಕರಣಗಳು ವರದಿಯಾಗಿವೆ. ಈ ಸೋಂಕಿಗೆ ವೈರಸ್‌ನ ಡೆಲ್ಟಾ ತಳಿಯ ಉಪತಳಿಯಾದ ‘ಎವೈ.4’ ಕಾರಣ ಎಂಬುದು ಜಿನೋಮ್‌ ಸೀಕ್ವೆನ್ಸಿಂಗ್’ನಿಂದ ದೃಢಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಉಪತಳಿಯ ಸೋಂಕು ಹೆಚ್ಚು ವೇಗವಾಗಿ ಪ್ರಸರಣಗೊಳ್ಳುವುದಲ್ಲದೇ, ಮೂಲ ವೈರಸ್‌ಗಿಂತಲೂ ಅಧಿಕ ಸೋಂಕುಕಾರಕ ಎಂದು ಜೆಜಿಯಾಂಗ್‌ ಪ್ರಾಂತ್ಯದ ರೋಗ ನಿಯಂತ್ರಣ ಕೇಂದ್ರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT