ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೊನಾಲ್ಡ್ ಟ್ರಂಪ್ ತತ್ವ, ಸಿದ್ಧಾಂಗಳಿಲ್ಲದ ವ್ಯಕ್ತಿ: ಟ್ರಂಪ್ ಸಹೋದರಿ ಟೀಕೆ

ಹಿರಿಯ ಸಹೋದರಿ ಮೇರಿಯನ್ನೆ ಟ್ರಂಪ್ ಬ್ಯಾರಿ ಕಟು ಟೀಕೆ
Last Updated 23 ಆಗಸ್ಟ್ 2020, 6:43 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ’ಡೊನಾಲ್ಡ್ ಟ್ರಂಪ್ ಒಬ್ಬ ತತ್ವ ಸಿದ್ಧಾಂತವಿಲ್ಲದ ವ್ಯಕ್ತಿ’ ಎಂದು ಅವರ ಹಿರಿಯ ಸಹೋದರಿ, ಫೆಡರಲ್ ಮಾಜಿ ನ್ಯಾಯಾಧೀಶೆ ಮೇರಿಯಾನ್ನೆ ಟ್ರಂಪ್ ಬ್ಯಾರಿ ಕಟುವಾಗಿ ಟೀಕಿಸಿರುವ ಧ್ವನಿಸುರುಳಿಗಳು ಈಗ ಅಮೆರಿಕದಲ್ಲಿ ಸದ್ದು ಮಾಡುತ್ತಿವೆ.

ಅಮೆರಿಕ ಅಧ್ಯಕ್ಷರ ಕುರಿತು ಈ ಹಿಂದೆ ಆಡಿರುವ ಮಾತುಗಳನ್ನು ಅವರ ಸಹೋದರನ ಪುತ್ರಿ ಮೇರಿ ಟ್ರಂಪ್ ಗೌಪ್ಯವಾಗಿ ಧ್ವನಿಮುದ್ರಿಸಿಕೊಂಡಿದ್ದಾರೆ. ಇದನ್ನು ಸರಣಿ ರೂಪದಲ್ಲಿ ಶನಿವಾರ ಬಿಡುಗಡೆ ಮಾಡಿದ್ದಾರೆ. ಆ ಸರಣಿಯ ಒಂದು ಧ್ವನಿಸುರುಳಿಯಲ್ಲಿ ಟ್ರಂಪ್ ಅವರನ್ನು ಕಟುವಾಗಿ ಟೀಕಿಸಿರುವ ಮಾತುಗಳಿವೆ.

2018ರ ಫಾಕ್ಸ್‌ನ್ಯೂಸ್‌ ವಾಹಿನಿಯ ಸಂದರ್ಶನವೊಂದರಲ್ಲಿ ಡೊನಾಲ್ಡ್ ಟ್ರಂಪ್, ಹೆತ್ತವರಿಂದ ಬೇರ್ಪಟ್ಟ ವಲಸೆ ಮಕ್ಕಳ ಪ್ರಕರಣವೊಂದರಲ್ಲಿ ಬಹಳ ಕೆಟ್ಟದಾಗಿ ವರ್ತಿಸಿದ್ದನ್ನು ನಾನು ಕೇಳಿರುವುದಾಗಿ ಬ್ಯಾರಿ ಹೇಳಿರುವುದು ಈ ಧ್ವನಿಸುರಳಿಯಲ್ಲಿದೆ. ಇವರ ವಲಸೆ ನೀತಿಯಿಂದಾಗಿ ಗಡಿಯಲ್ಲಿ ತಾಯಿ – ಮಕ್ಕಳು ಬೇರ್ಪಟ್ಟ ಪ್ರಕರಣಗಳ ಬಗ್ಗೆಯೂ ಆ ಸಂದರ್ಶನದಲ್ಲಿ ಹೇಳಿದ್ದಾರೆ.

ಮೇರಿಯಾನ್ನೆ ಟ್ರಂಪ್ ಅವರು ಡೊನಾಲ್ಡ್ ಟ್ರಂಪ್ ಅವರ ಸಹೋದರನ ಮಗಳು. ಈಕೆ, ಡೊನಾಲ್ಡ್ ಟ್ರಂಪ್ ಅವರ ವ್ಯಕ್ತಿತ್ವವನ್ನು ಟೀಕಿಸಿ ’ಟೂ ಮಚ್‌ ಅಂಡ್ ನೆವರ್ ಎನಫ್‌: ಹೌ ಮೈ ಫ್ಯಾಮಿಲಿ ಕ್ರಿಯೇಟೆಡ್‌ ದಿ ವರ್ಲ್ಡ್‌ ಮೋಸ್ಟ್ ಡೇಂಜರ್ಸ್‌ ಮ್ಯಾನ್’ ಎಂಬ ಕೃತಿಯನ್ನು ಬರೆದಿದ್ದಾರೆ. ’ಟ್ರಂಪ್ ಕುರಿತುಬ್ಯಾರಿ ಅವರು 2018 ಮತ್ತು 2019ರಲ್ಲಿ ಆಡಿದ ಮಾತುಗಳನ್ನು ನಾನು ಗೌಪ್ಯವಾಗಿ ರೆಕಾರ್ಡ್ ಮಾಡಿಕೊಂಡಿದ್ದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT