ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಎರಡನೇ ಅವಧಿಯ ಮೊದಲ ಸ್ಟೇಟ್ ಆಫ್ ಯೂನಿಯನ್ ಭಾಷಣದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದಾರೆ. ಅಮೆರಿಕವನ್ನು ಮತ್ತೆ ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡುವ ತಮ್ಮ ಕಾರ್ಯಸೂಚಿಯ ಮೇಲೆ ಅವರ ಭಾಷಣ ಕೇಂದ್ರೀಕರಿಸಿತ್ತು ಎಂದು ವರದಿ ತಿಳಿಸಿದೆ.

ತಮ್ಮ ಎರಡನೇ ಅವಧಿಯ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆ ಈ ಭಾಷಣ ಮಾಡಲಾಗಿದ್ದು, ದೂರದರ್ಶನದಲ್ಲಿ ಪ್ರಸಾರವಾಗಿದೆ.

ಈ ಭಾಷಣದಲ್ಲಿ, ಅವರು ತಮ್ಮ ಅಧಿಕಾರದ ಮೊದಲ ವರ್ಷದ ಸಾಧನೆ ಬಗ್ಗೆ ಮಾತನಾಡಿದ್ದಾರೆ. ಆರ್ಥಿಕ ಪುನರುಜ್ಜೀವನ, ಕಠಿಣ ಗಡಿರೇಖೆಯ ನಿರ್ಬಂಧ ಮತ್ತು ಅಮೆರಿಕವನ್ನು ಸೂಪರ್ ಪವರ್ ಮಾಡುವತ್ತ ಕೇಂದ್ರೀಕರಿಸಿತ್ತು ಎಂದು ಹೇಳಿದ್ದಾರೆ.

ನಾನು ಅಧಿಕಾರ ವಹಿಸಿಕೊಂಡಾಗ ಅಮೆರಿಕವು ನಿಶ್ಚಲ ಆರ್ಥಿಕತೆ, ಮುಕ್ತ ಗಡಿ, ಕಳಪೆ ಪೊಲೀಸ್ ಮತ್ತು ಮಿಲಿಟರಿ ನೇಮಕಾತಿ ಹೊಂದಿದ್ದ ರಾಷ್ಟ್ರವಾಗಿತ್ತು. ಈಗ ಆರ್ಥಿಕತೆಯು ಉತ್ಕರ್ಷಗೊಳ್ಳುತ್ತಿದೆ, ಗಡಿಗಳು ಸುರಕ್ಷಿತವಾಗಿವೆ ಮತ್ತು ಪೊಲೀಸರು ಹಿಂದೆಂದಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಕಳೆದ ಒಂಬತ್ತು ತಿಂಗಳಲ್ಲಿ ಅಮೆರಿಕಕ್ಕೆ ಯಾರೊಬ್ಬರೂ ಅಕ್ರಮವಾಗಿ ಪ್ರವೇಶಿಸಿಲ್ಲ. ಅಕ್ರಮ ವಲಸಿಗರ ಸಂಖ್ಯೆ ಶೂನ್ಯ ಎಂದ ಟ್ರಂಪ್, ಬೇರೆ ದೇಶಗಳ ಜನರನ್ನು ಕಾನೂನುಬದ್ಧವಾಗಿ ಮಾತ್ರ ಅಮೆರಿಕಕ್ಕೆ ಪ್ರವೇಶಿಸಲು ಅನುಮತಿಸಲಾಗುತ್ತದೆ ಎಂದು ಹೇಳಿದ್ದಾರೆ.

ನಮ್ಮ ರಾಷ್ಟ್ರವು ಗನವೈಭವಕ್ಕೆ ಮರಳಿದೆ. ಹಿಂದೆಂದಿಗಿಂತಲೂ ದೊಡ್ಡ, ಉತ್ತಮ, ಶ್ರೀಮಂತ ಮತ್ತು ಬಲಶಾಲಿ ದೇಶವಾಗಿದೆ ಎಂದು ಟ್ರಂಪ್ ಬೆನ್ನು ತಟ್ಟಿಕೊಂಡಿದ್ದಾರೆ.

ಅಮೆರಿಕಕ್ಕೆ ಸ್ವಾತಂತ್ರ್ಯ ಸಿಕ್ಕು ಈ ಜುಲೈ 4ಕ್ಕೆ ಎರಡೂವರೆ ಶತಮಾನ ಕಳೆಯುತ್ತಿದೆ. ಆ ಹೊತ್ತಿಗೆ ನಾವು ಭೂಮಿಯ ಮೇಲೆ ಅತ್ಯಂತ ಅದ್ಭುತ, ಅಸಾಧಾರಣ, ಪ್ರಗತಿಪರ ರಾಷ್ಟ್ರವಾಗಿ ಹೊರಹೊಮ್ಮುತ್ತೇವೆ. ಈ ವರೆಗೂ ಕಾಣದನ್ನ ದೇಶದ ಜನ ಕಾಣುತ್ತಾರೆ ಎಂದಿದ್ಧಾರೆ.

ಈ ಹಿಂದೆ ದೇಶದಲ್ಲಿ ಹತ್ಯೆ ಪ್ರಮಾಣ ಗಮನಾರ್ಹ ಪ್ರಮಾಣದಲ್ಲಿತ್ತು. ಈಗ ಕೊಲೆ ಪ್ರಮಾಣವು ಇತಿಹಾಸದಲ್ಲಿ ಅತಿದೊಡ್ಡ ಕುಸಿತವನ್ನು ಕಂಡಿದೆ ಎಂದು ಅಧ್ಯಕ್ಷರು ಹೇಳಿದ್ದಾರೆ.

ಮೂಲ ಹಣದುಬ್ಬರ ಕಳೆದ ಐದು ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಮಟ್ಟಕ್ಕೆಇಳಿದಿದ್ದು, 2025ರ ಕೊನೆಯ ತ್ರೈಮಾಸಿಕದಲ್ಲಿ ಇದು ಶೇ1.75ಕ್ಕೆ ಕುಸಿದಿದೆ ಎಂದಿದ್ದಾರೆ. ಅನಿಲ ಬೆಲೆ ಗ್ಯಾಲನ್ಗೆ 1.85 ಡಾಲರ್ಗೆ ಬಂದಿದೆ. ಕೇವಲ ಒಂದು ವರ್ಷದಲ್ಲಿ ವಿಶಿಷ್ಟ ಅಡಮಾನದ ವಾರ್ಷಿಕ ವೆಚ್ಚ 5,000 ಡಾಲರ್ಗಳಷ್ಟು ಕಡಿಮೆಯಾಗಿದೆ. ಷೇರು ಮಾರುಕಟ್ಟೆ ಒಂದೇ ವರ್ಷದಲ್ಲಿ ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಹೂಡಿಕೆದಾರರೆಲ್ಲರೂ ಲಾಭ ಗಳಿಸುತ್ತಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.

12 ತಿಂಗಳಲ್ಲಿ, ಅಮೆರಿಕ 18 ಟ್ರಿಲಿಯನ್ ಡಾಲರ್ ಹೂಡಿಕೆಯನ್ನು ಪ್ರಪಂಚದಾದ್ಯಂತದಿಂದ ಪಡೆದಿದೆ. ವೆನೆಜುವೆಲಾದಿಂದ ನಮಗೆ 80 ಮಿಲಿಯನ್ ಡಾಲರ್ಗಿಂತಲೂ ಹೆಚ್ಚು ಮೌಲ್ಯದ ತೈಲ ಸಿಕ್ಕಿದೆ. ನಾನು "ಡ್ರಿಲ್ ಬೇಬಿ ಡ್ರಿಲ್’ಎಂಬ ನನ್ನ ಭರವಸೆಯನ್ನು ಉಳಿಸಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಇತಿಹಾಸಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಸದ್ಯ ಹೆಚ್ಚಿನ ಪ್ರಮಾಣದಲ್ಲಿ ಅಮೆರಿಕನ್ನರಿಗೆ ಉದ್ಯೋಗ ಸಿಕ್ಕಿದೆ. ಖಾಸಗಿ ವಲಯದಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಅಮೆರಿಕದ ರಾಜ್ಯಗಳ ಒಕ್ಕೂಟ ವ್ಯವಸ್ಥೆಯು ಬಲವಾಗಿದೆ ಎಂದು ಟ್ರಂಪ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ನಮ್ಮ ದೇಶವು ಎಲ್ಲ ಕಡೆ ಗೆಲುವು ಸಾಧಿಸುತ್ತಿದೆ. ವಾಷಿಂಗ್ಟನ್ ಡಿ.ಸಿ ದೇಶದ ಅತ್ಯಂತ ಸುರಕ್ಷಿತ ನಗರವಾಗಿರುವಂತೆಯೇ ಲಾಸ್ ಏಂಜಲೀಸ್ ಕೂಡ ಸುರಕ್ಷಿತವಾಗಿರುತ್ತದೆ, 2028ರ ಒಲಿಂಪಿಕ್ಸ್ ಅನ್ನು ಲಾಸ್ ಏಂಜಲೀಸ್ನಲ್ಲಿ ನಡೆಯಲಿದೆ ಎಂದು ಹೇಳಿದರು.

ಟ್ರಂಪ್ ಅಮೆರಿಕದ ವೀರರನ್ನು ಗೌರವಿಸುತ್ತಾರೆ ಎಂದ ಅವರು, ಬಡವರು ತೆರಿಗೆ ಕಡಿತವನ್ನು ಬಯಸಿದ್ದರು. ನಾವು ಅದಕ್ಕಾಗಿ ದೊಡ್ಡ ಸುಂದರ ಮಸೂದೆಯನ್ನು ತಂದಿದ್ದೇವೆ. ಹೆಚ್ಚುವರಿ ದುಡಿಮೆ ಮೇಲೆ ಯಾವುದೇ ತೆರಿಗೆಯನ್ನು ಹಾಕುವುದಿಲ್ಲ ಎಂದಿದ್ದಾರೆ.

ಅಮೆರಿಕದ ಮಕ್ಕಳು 18 ವರ್ಷ ತುಂಬುವ ಹೊತ್ತಿಗೆ ಅವರ ಖಾತೆಗಳಲ್ಲಿ1,00,000 ಡಾಲರ್ ಇರುತ್ತದೆ ಎಂದು ಟ್ರಂಪ್ ಹೇಳಿದರು.

‘ನಾನು ನೂರಾರು ಶತಕೋಟಿ ಡಾಲರ್ ಆದಾಯ ತರಲು ಸುಂಕಗಳನ್ನು ಅಸ್ತ್ರವಾಗಿ ಬಳಸಿದ್ದೇನೆ. ಸುಂಕ ಹೇರಿಕೆ ಬಳಿಕವೂ ಎಲ್ಲ ಮಿತ್ರ ರಾಷ್ಟ್ರಗಳು ಸಂತೋಷವಾಗಿವೆ. ಆದರೆ, ಸುಂಕಗಳನ್ನು ರದ್ದುಗೊಳಿಸಿದ ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪು ದುರದೃಷ್ಟಕರ’ಎಂದು ದೂರಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿಯೂ ವಿವಿಧ ದೇಶಗಳು ಈಗಾಗಲೇ ರೂಪಿಸಲಾದ ಒಪ್ಪಂದಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತವೆ ಎಂದು ಟ್ರಂಪ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.