ವಾಷಿಂಗ್ಟನ್: ‘ಪೊಲೀಸರ ಬಲಪ್ರಯೋಗ ವೃತ್ತಿಪರ ಮಟ್ಟದಲ್ಲಿರುವ ರೀತಿ ಕಾನೂನು ರೂಪಿಸಲಾಗುತ್ತಿದ್ದು, ಇದು ಅಂತಿಮ ಹಂತದಲ್ಲಿದೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಫ್ರೊ–ಅಮೆರಿಕನ್ ಜಾರ್ಜ್ ಫ್ಲಾಯ್ಡ್, ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಅಮಾನುಷ ರೀತಿ ಸಾವಿಗೀಡಾದ ನಂತರ ಆಡಳಿತದ ಮೇಲೆ ಒತ್ತಡ ಹೆಚ್ಚುತ್ತಿದೆ. ಮಿನಿಯಾಪೊಲಿಸ್‌ನಲ್ಲಿ ಮೇ 25ರಂದುಫ್ಲಾಯ್ಡ್ ಕತ್ತಿನ ಮೇಲೆ ಬಿಳಿಯ ಪೊಲೀಸ್ ಅಧಿಕಾರಿ ಡೆರೆಕ್ ಷಾವಿನ್ ಮೊಣಕಾಲನ್ನು 9 ನಿಮಿಷ ಒತ್ತಿಹಿಡಿದು ಸಾವಿಗೆ ಕಾರಣನಾಗಿದ್ದ. ಈ ಪ್ರಕರಣ ಅಮೆರಿಕದ ಎಲ್ಲೆಡೆ ಪ್ರತಿಭಟನೆ ಕಾಡ್ಗಿಚ್ಚಿನಂತೆ ವ್ಯಾಪಿಸಲು ಕಾರಣವಾಗಿತ್ತು.

‘ಎರಡು ವಾರಗಳ ಹಿಂದೆ ನಡೆದ ಆ ಘಟನೆ ತಲೆತಗ್ಗಿಸುವಂತಿತ್ತು. ನಂತರದ ದಿನಗಳಲ್ಲಿ ಹಲವರು ಸಾವಿಗೀಡಾಗಿದ್ದಾರೆ. ಇದು ಘೋರ ಮತ್ತು ಅನ್ಯಾಯ. ಅಂಥದ್ದನ್ನು ಮತ್ತೆ ನೋಡಲುಬಯಸುವುದಿಲ್ಲ’ ಎಂದು ಟ್ರಂಪ್ ಡಲ್ಲಾಸ್‌ನಲ್ಲಿ ಗುರುವಾರ ನಡೆದ ದುಂಡುಮೇಜಿನ ಸಭೆಯಲ್ಲಿ ತಿಳಿಸಿದ್ದಾರೆ.

ಧಾರ್ಮಿಕ ನಾಯಕರು, ಕಾನೂನು ವಿಭಾಗದ ಪ್ರತಿನಿಧಿಗಳು, ವಾಣಿಜ್ಯ ಉದ್ಯಮಿಗಳು ಮತ್ತು ಟ್ರಂಪ್ ಆಡಳಿತದ ಹಿರಿಯ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

‘ದೇಶದಾದ್ಯಂತ ಪೊಲೀಸ್ ಇಲಾಖೆ ಅತ್ಯಂತ ವೃತ್ತಿಪರವಾಗಿ ಕಾರ್ಯನಿರ್ವಹಿಸುವಂತೆ ಉತ್ತೇಜಿಸುವ ರೀತಿಯಲ್ಲಿ ಈ ಕಾನೂನು ಇರಲಿದೆ. ಪ್ರತಿಭಟನೆ ವೇಳೆಯೂ ಸಂಯಮ ವಹಿಸುವ ಮಾರ್ಗೋಪಾಯಗಳನ್ನು ಕಾನೂನು ಒಳಗೊಂಡಿದೆ’ ಎಂದಿದ್ದಾರೆ.

ಆದರೆ ಈ ಬಗ್ಗೆ ಅವರು ಕೆಲ ವಿವರಗಳನ್ನಷ್ಟೇ ನೀಡಿದರು. ‘ಪ್ರತಿಯೊಂದು ಸಮುದಾಯದ ಮಕ್ಕಳು ಹಿಂಸೆ, ಭಯದಿಂದ ಮುಕ್ತವಾದ ವಾತಾವರಣದಲ್ಲಿ ಬೆಳೆಯಬೇಕು’ ಎಂದು ಅವರು ಹೇಳಿದ್ದಾರೆ.

ಪೊಲೀಸ್ ವ್ಯವಸ್ಥೆ ಸುಧಾರಣೆಯ ಆದೇಶದ ಜೊತೆಗೆ, ಅಲ್ಪಸಂಖ್ಯಾತ ಸಮುದಾಯಗಳ ಆರ್ಥಿಕ ಅಭಿವೃದ್ಧಿ ಕಡೆ ಯೋಜನೆ ಹಮ್ಮಿಕೊಳ್ಳಲಾಗುವುದು. ಆರೋಗ್ಯ ಕಾಳಜಿ ವಿಷಯದಲ್ಲಿ ತಾರತಮ್ಯ ನಿವಾರಣೆ, ಶಾಲೆಗಳ ಆಯ್ಕೆಗೆ ಅವಕಾಶ ನೀಡುವ ವಿಷಯದಲ್ಲೂ ಗಮನಹರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಅಮೆರಿಕನ್ನರು ಉತ್ತಮ ನಡವಳಿಕೆಯುಳ್ಳವರು ಎಂದು ಹೇಳಿದ ಟ್ರಂಪ್, ಜನರು ಎಲ್ಲೇ ಹೋದರೂ ಅಂಧಾಬಿಮಾನ ಮತ್ತು ಪೂರ್ವಗ್ರಹಗಳನ್ನು ತೊಡೆದುಹಾಕಲು ಒಗ್ಗಟ್ಟಾಗಬೇಕು ಎಂದು ಮನವಿ ಮಾಡಿದರು.

‘ರಾಜಕಾರಣಿಗಳು ಪೊಳ್ಳು ಆರೋಪಗಳನ್ನು ಮಾಡುತ್ತಾರೆ. ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.