ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧಕ್ಕೆ ಸಿದ್ಧವಾಗಿರಿ: ಸೇನೆಗೆ ಷಿ ಆದೇಶ

Last Updated 5 ಜನವರಿ 2019, 17:08 IST
ಅಕ್ಷರ ಗಾತ್ರ

ಬೀಜಿಂಗ್ : ಯುದ್ಧ ಎದುರಿಸಲು ಹೆಚ್ಚಿನ ಸಿದ್ಧತೆ ಮಾಡಿಕೊಳ್ಳಿ ಎಂದು ಚೀನಾದ ಸೇನೆ ಪೀಪಲ್ಸ್ ಲಿಬರೇಷನ್ ಆರ್ಮಿಗೆ (ಪಿಎಲ್‌ಎ)ಅಧ್ಯಕ್ಷ ಷಿ ಜಿನ್‌ಪಿಂಗ್ಆದೇಶಿಸಿದ್ದಾರೆ.

ಕೇಂದ್ರ ಸೇನಾ ಸಮಿತಿಯ (ಸಿಎಂಸಿ) ಸಭೆ ಉದ್ದೇಶಿಸಿ ಮಾತನಾಡಿದ ಷಿ,‘ಅಪಾಯ ಮತ್ತು ಸವಾಲುಗಳು ಸದಾ ಇರುತ್ತವೆ. ಶತಮಾನದಲ್ಲಿಯೇ ಕಾಣದಿರುವಂತಹ ಮಹತ್ತರ ಬದಲಾವಣೆಗಳಿಗೆ ವಿಶ್ವ ಸಾಕ್ಷಿಯಾಗುತ್ತಿದೆ. ಸೇನೆ ತಮ್ಮ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿಕೊಳ್ಳಬೇಕು’ಎಂದು ಹೇಳಿದ್ದಾಗಿ ಚೀನಾ ಡೈಲಿ ವರದಿ ಮಾಡಿದೆ.

‘ಚೀನಾ, ಅಭಿವೃದ್ಧಿಗೆ ವ್ಯೂಹಾತ್ಮಕ ಅವಕಾಶ ಹೊಂದಿರುವ‌ಪ್ರಮುಖ ಕಾಲಘಟ್ಟದಲ್ಲಿದೆ. ಮಹತ್ತರ ಬದಲಾವಣೆ, ಅಂದಾಜಿಸಲಾಗದ ಅಪಾಯಗಳು ಇರುವ ಕಾಲದಲ್ಲಿ ಸಿದ್ಧತೆ ಮುಖ್ಯವಾದುದು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT