ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀವ್ರವಾಗಿ ಹೆಚ್ಚುತ್ತಿರುವ ಭೂಮಿ ತಾಪಮಾನ: ಅಧ್ಯಯನ

ಗರಿಷ್ಠಮಟ್ಟದಲ್ಲಿ ಹಸಿರುಮನೆ ಅನಿಲಗಳ ಹೊರಸೂಸುವಿಕೆ
Published 9 ಜೂನ್ 2023, 13:06 IST
Last Updated 9 ಜೂನ್ 2023, 13:06 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಹಸಿರುಮನೆ ಅನಿಲಗಳ ಹೊರಸೂಸುವಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಈ ಅನಿಲಗಳು ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗುತ್ತಿವೆ. ಕಳೆದ ಎರಡು ಶತಮಾನಗಳ ಅವಧಿಯಲ್ಲಿ ಭೂಮಿಯ ಮೇಲ್ಮೈ ತಾಪಮಾನ 1.14 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳವಾಗಿರುವುದಕ್ಕೆ ಈ ವಿದ್ಯಮಾನವೇ ಕಾರಣ ಎಂದು ಹೊಸ ಅಧ್ಯಯನವೊಂದು ಹೇಳಿದೆ.

ಪ್ರತಿ ದಶಕದ ಅವಧಿಯಲ್ಲಿ ತಾಪಮಾನದಲ್ಲಿ ಆಗುತ್ತಿರುವ ಹೆಚ್ಚಳದ ದರ 0.2 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಇದರಿಂದ ಹಿಂದೆಂದಿಗಿಂತಲೂ ವೇಗವಾಗಿ ಭೂಮಿಯ ವಾತಾವರಣ ಬಿಸಿಯಾಗುತ್ತಿದೆ ಎಂದು ಇದೇ ಅಧ್ಯಯನ ಹೇಳಿದೆ.

‘ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಅಂತರ ಸರ್ಕಾರ ಸಮಿತಿ’ (ಐಪಿಸಿಸಿ) ಈ ಅಧ್ಯಯನ ನಡೆಸಿ, ವರದಿಯನ್ನು ಪ್ರಕಟಿಸಿದೆ. ವಿಶ್ವದ ವಿವಿಧ ದೇಶಗಳ 50 ವಿಜ್ಞಾನಿಗಳು ಈ ಅಧ್ಯಯನ ಕೈಗೊಂಡಿದ್ದರು.

2019ರಲ್ಲಿ ಈ ಸಮಿತಿಯು ಮೊದಲ ವರದಿ ಸಲ್ಲಿಸಿತ್ತು. ನಂತರದ ವರ್ಷಗಳಲ್ಲಿ, ಪರಿಸರವನ್ನು ಸೇರುತ್ತಿರುವ ಹಸಿರುಮನೆ ಅನಿಲಗಳ ಪ್ರಮಾಣ ಕುರಿತು ಅಧ್ಯಯನ ನಡೆಸಲಾಗಿದೆ.

ಅದರಲ್ಲೂ, ಕೋವಿಡ್‌ ಪಿಡುಗಿನ ನಂತರದ ದಿನಗಳಲ್ಲಿ ಹಸಿರುಮನೆ ಅನಿಲಗಳ ಹೊರಸೂಸುವಿಕೆ ಅಧಿಕವಾಗಿರುವುದು ಕಂಡುಬಂದಿದೆ. 54 ಶತಕೋಟಿ ಟನ್‌ಗಳಷ್ಟು ಇಂಗಾಲದ ಡೈಆಕ್ಸೈಡ್‌ಗೆ ಸಮನಾದ ಪ್ರಮಾಣದಷ್ಟು ಹಸಿರುಮನೆ ಅನಿಲಗಳು ಒಂದು ವರ್ಷದ ಅವಧಿಯಲ್ಲಿ ಪರಿಸರವನ್ನು ಸೇರಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಅಧ್ಯಯನದಲ್ಲಿ ಕಂಡುಬಂದ ಅಂಶಗಳನ್ನು ಸಂಬಂಧಪಟ್ಟ ರಾಷ್ಟ್ರಗಳು ಗಂಭೀರವಾಗಿ ಪರಿಗಣಿಸಬೇಕು. ಹಸಿರುಮನೆ ಅನಿಲಗಳ ಹೊರಸೂಸುವಿಕೆಗೆ ಕಡಿವಾಣ ಹಾಕಿ, ಆ ಮೂಲಕ ಹವಾಮಾನ ಬದಲಾವಣೆ ತಡೆಯಲು ಶ್ರಮಿಸಬೇಕು ಎಂದು ಸಂಶೋಧಕರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT